ಸ್ಪೈ ಏಜೆಂಟ್ ಪಾತ್ರದಲ್ಲಿ ಮತ್ತೆ ಬರಲಿದ್ದಾರೆ ಸಲ್ಮಾನ್-ಕತ್ರೀನಾ: ಟೈಗರ್-3 ಟ್ರೇಲರ್ ಬಿಡುಗಡೆ

Photo: twitter.com/yrf
ಮುಂಬೈ: ಗೂಢಚಾರ ಕಥಾ ಹಂದರವುಳ್ಳ ಟೈಗರ್ ಸರಣಿಯ ಮೂರನೇ ಚಿತ್ರವಾದ ಟೈಗರ್-3 ಯ ಟ್ರೇಲರ್ ಸೋಮವಾರ ಬಿಡುಗಡೆಯಾಗಿದೆ.
ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ಟೈಗರ್-3 ಯಲ್ಲಿ ಬಾಲಿವುಡ್ನ ಗೂಢಾಚಾರ ಹಿನ್ನೆಲೆಯ ಚಿತ್ರಗಳಾದ ವಾರ್ ಹಾಗೂ ಪಠಾಣ್ ಚಿತ್ರಗಳನ್ನು ಒಂದೇ ಯುನಿವರ್ಸ್ ಅಲ್ಲಿ ತರಲಾಗುತ್ತಿದೆ ಎಂಬ ಸೂಚನೆಯನ್ನು ಟ್ರೇಲರ್ನಲ್ಲಿ ನೀಡಲಾಗಿದೆ.
ವಾರ್ ಹಾಗೂ ಜವಾನ್ ಚಿತ್ರಕ್ಕೆ ಪ್ರತ್ಯೇಕ ಅಭಿಮಾನಿ ವರ್ಗಗಳು ಇರುವುದರಿಂದ ಹಾಗೂ ಟೈಗರ್ ಸರಣಿಯಲ್ಲಿ ಈ ಹಿಂದಿನ ಎರಡು ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿರುವುದರಿಂದ ಟೈಗರ್ 3 ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.
ಚಿತ್ರದ ಮೊದಲೆರಡು ಭಾಗಗಳಲ್ಲಿ ಕಾಣಿಸಿಕೊಂಡ ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಅವರೇ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದು, ನಟ ಇಮ್ರಾನ್ ಹಶ್ಮಿ ಕೂಡಾ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಟೈಗರ್ 3 ದೀಪಾವಳಿಗೆ ಬಿಡುಗಡೆಯಾಗುತ್ತಿದ್ದು, ನವೆಂಬರ್ 12 ರಂದು ತೆರೆಗೆ ಅಪ್ಪಳಿಸಲಿದೆ. ಮನೀಶ್ ಶರ್ಮಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಪಠಾಣ್ ಚಿತ್ರದಲ್ಲಿ ಟೈಗರ್ ಪಾತ್ರದಲ್ಲೇ ಒಂದು ಪ್ರಮುಖ ಭಾಗದಲ್ಲಿ ಸಲ್ಮಾನ್ ಖಾನ್ ನಟಿಸಿದ್ದರು. ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಅಭಿನಯದ ವಾರ್, ಶಾರೂಖ್ ಅಭಿನಯದ ವಾರ್ ಚಿತ್ರಗಳನ್ನೆಲ್ಲಾ ಒಂದೇ ಯುನಿವರ್ಸ್ಗೆ (ವಿಶ್ವ) ತರುವ ನಿರ್ಮಾಣ ಸಂಸ್ಥೆಯ ನಿರ್ಧಾರದಿಂದ ಟೈಗರ್ ಸರಣಿಗೆ ಕುತೂಹಲ ಹೆಚ್ಚಿದೆ.







