‘ದಿ ಕಾಶ್ಮೀರ್ ಫೈಲ್ಸ್’ ಗೆ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಟೀಕೆ

ಚೆನ್ನೈ: ವಿವಾದಿತ ಚಲನಚಿತ್ರ “ದಿ ಕಾಶ್ಮೀರ್ ಫೈಲ್ಸ್”ಗೆ ರಾಷ್ಟ್ರೀಯ ಏಕೀಕರಣದ ಕುರಿತ ಅತ್ಯುತ್ತಮ ಚಿತ್ರಕ್ಕಾಗಿ ನರ್ಗಿಸ್ ದತ್ತ್ ಪ್ರಶಸ್ತಿ ನೀಡಲು ನಿರ್ಧರಿಸಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಟೀಕಿಸಿದ್ದಾರೆ.
“ಮತೀಯ ದ್ವೇಷ ಹರಡುತ್ತದೆ ಎಂಬ ಕಾರಣಕ್ಕಾಗಿ ವಸ್ತುನಿಷ್ಠ ವಿಮರ್ಶಕರಿಂದ ಟೀಕೆಗೊಳಗಾಗಿರುವ ಚಲನಚಿತ್ರವೊಂದನ್ನು ಸೌಹಾರ್ದತೆಗೆ ಪೂರಕವಾಗಿರುವ ಚಲನಚಿತ್ರಕ್ಕೆ ನೀಡಲಾಗುವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಆಘಾತಕಾರಿ. ಅಗ್ಗದ ರಾಜಕಾರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳ ಘನತೆಯೊಂದಿಗೆ ರಾಜಿ ಮಾಡಿಕೊಳ್ಳಬಾರದು,” ಎಂದು ಸ್ಟಾಲಿನ್ ಹೇಳಿದ್ದಾರೆ.
Next Story





