ಹಾಲಿವುಡ್ ಶೈಲಿಯಲ್ಲಿ ಯಶ್ ‘ಟಾಕ್ಸಿಕ್’; ಟೀಸರ್ ಬಿಡುಗಡೆ

Photo :X/@Toxic_themovie
2 ನಿಮಿಷ 31 ಸೆಕೆಂಡುಗಳಿರುವ ವಿಡಿಯೋ ಸ್ಮಶಾನದಲ್ಲಿ ನಡೆಯುವ ಒಂದು ಸನ್ನಿವೇಶವನ್ನು ತೋರಿಸುತ್ತದೆ. ಕೆಜಿಎಫ್ ರೀತಿಯಲ್ಲಿಯೇ ಕಪ್ಪು ಥೀಮ್ ಮತ್ತು ತೀವ್ರ ಸಂಗೀತವನ್ನು ಟೀಸರ್ನಲ್ಲಿ ಕಾಣಬಹುದು.
ಕೆಜಿಎಫ್ ನಂತರ ಖ್ಯಾತ ನಟ ಯಶ್ ಅವರ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಸ್’ ಟೀಸರ್ ಬಿಡುಗಡೆಯಾಗಿದೆ. ಯಶ್ ಜನ್ಮದಿನದಂದು 10 ಗಂಟೆ 10 ನಿಮಿಷಕ್ಕೆ ಬಿಡುಗಡೆಯಾದ ಹಾಲಿವುಡ್ ಶೈಲಿಯ ಟೀಸರ್ ಅಭಿಮಾನಿಗಳ ನಡುವೆ ಚರ್ಚೆಗೆ ಕಾರಣವಾಗಿದೆ.
2 ನಿಮಿಷ 31 ಸೆಕೆಂಡುಗಳಿರುವ ವಿಡಿಯೋ ಗೋವಾದ ಸ್ಮಶಾನದಲ್ಲಿ ನಡೆಯುವ ಒಂದು ಸನ್ನಿವೇಶವನ್ನು ತೋರಿಸುತ್ತದೆ. ಕೆಜಿಎಫ್ ರೀತಿಯಲ್ಲಿಯೇ ಕಪ್ಪು ಥೀಮ್ ಮತ್ತು ತೀವ್ರ ಸಂಗೀತವನ್ನು ಟೀಸರ್ ನಲ್ಲಿ ಕಾಣಬಹುದು.
ಟೀಸರ್ ಬದಲು ದೃಶ್ಯ ಬಿಡುಗಡೆ
ಇದು ಟೀಸರ್ಗಿಂತ ದೊಡ್ಡದೇ ಇರುವ ಕಾರಣ ಟ್ರೈಲರ್ ಎಂದೇ ಹೇಳಬಹುದು. ಚಿತ್ರದ ಇಡೀ ಒಂದು ದೃಶ್ಯವನ್ನು ತೋರಿಸಲಾಗಿದೆ. ಯಶ್ ಪಾತ್ರ ‘ರಾಯ’ ಧರಿಸಿದ ಅಕ್ಸೆಸರಿಗಳ ಬಗ್ಗೆಯೂ ಆನ್ಲೈನ್ನಲ್ಲಿ ಚರ್ಚೆ ಆರಂಭವಾಗಿದೆ. “ರಾಯ’ ಎನ್ನುವ ಹೆಸರೂ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿದೆ.
ಮಹಿಳಾ ನಟಿಯರ ಸಾಲು
ಸಿನಿಮಾದಲ್ಲಿ ಮಹಿಳಾ ನಟಿಯರ ಸಾಲೇ ಇದೆ. ಚಿತ್ರದಲ್ಲಿ ಗೀತು ಮೋಹನ್ದಾಸ್ ನಿರ್ದೇಶನವಿದೆ. ಈ ಮೊದಲು ಕಿಯಾರಾ ಆಡ್ವಾಣಿ, ನಯನತಾರ, ಹುಮಾ ಖುರೇಶಿ, ತಾರಾ ಸುತೈರಾ, ರುಕ್ಮಿಣಿ ವಸಂತ್ ಮೊದಲಾದವರು ಸಿನಿಮಾದಲ್ಲಿ ನಾಯಕಿಯರ ಪಾತ್ರ ನಿರ್ವಹಿಸಿದ್ದಾರೆ.
ಧುರಂಧರ್ 2 ವರ್ಸಸ್ ಟಾಕ್ಸಿಕ್
‘ಟಾಕ್ಸಿಕ್’ ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಚಿತ್ರೀಕರಿಸಲಾಗಿದ್ದು, ನಂತರ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗಿದೆ. 2026 ಮಾರ್ಚ್ 19ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ರಣ್ವೀರ್ ಸಿಂಗ್ ನಟನೆಯ ಆದಿತ್ಯ ಧರ್ ನಿರ್ದೇಶನದ “ಧುರಂಧರ್ 2” ಕೂಡ ಅದೇ ದಿನ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡು ದಿಗ್ಗಜರ ಸಿನಿಮಾಗಳು ಒಂದೇ ದಿನ ʼಕ್ಲ್ಯಾಷ್ʼ ಆಗಲಿದೆ.







