ಬಾಕ್ಸ್ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್: ‘ಧುರಂಧರ್’ನ 5ನೇ ವಾರಾಂತ್ಯದ ದಾಖಲೆ ಮುರಿದ ‘ಹನುಮಾನ್ ಅಂಶ್’!

Photo credits: Movie Stills
ಎರಡು ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾದ ಸಿನಿಮಾ ‘ಹನುಮಾನ್ ಅಂಶ್’ ಇದೀಗ ರಣ್ವೀರ್ ಸಿಂಗ್ ಅವರ ‘ಧುರಂಧರ್’ ಸಿನಿಮಾಗಳ ಐದನೇ ವಾರಾಂತ್ಯದ ಕಲೆಕ್ಷನ್ಗಳನ್ನು ಮೀರಿಸುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಸಾಧನೆ ಮಾಡಿದೆ. ಬಾಯಿ ಮಾತಿನಿಂದಲೇ ಪ್ರಚಾರ ಪಡೆದ ಈ ಹಿಂದಿ ಸಿನಿಮಾ ಐದನೇ ವಾರಾಂತ್ಯದ ಕಲೆಕ್ಷನ್ಗಳಿಗೆ ಹೊಸ ಮಾನದಂಡ ಸ್ಥಾಪಿಸಿದೆ.
2 ಕೋಟಿಯಲ್ಲಿ ನಿರ್ಮಾಣವಾದ ಸಿನಿಮಾವಾದ ‘ಹನುಮಾನ್ ಅಂಶ್’ ಐದನೇ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್ನಲ್ಲಿ ಅತಿ ದೊಡ್ಡ ಗಳಿಕೆ ಸಾಧಿಸಿದೆ. ಈ ಸಿನಿಮಾ ಐದನೇ ವಾರಾಂತ್ಯದ ಶುಕ್ರವಾರ, ಶನಿವಾರ ಮತ್ತು ಭಾನುವಾರ ಸೇರಿ ಒಟ್ಟು 49.25 ಕೋಟಿ ರೂ.ಗಳನ್ನು ನಿವ್ವಳವಾಗಿ ಗಳಿಸಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ಧುರಂಧರ್ 2’ ಸಿನಿಮಾದ ಐದನೇ ವಾರಾಂತ್ಯದ ಕಲೆಕ್ಷನ್ 12.55 ಕೋಟಿ ರೂ. ಆಗಿತ್ತು.
ಐದನೇ ವಾರಾಂತ್ಯದ ಗಳಿಕೆಯ ದಾಖಲೆ
ಧುರಂಧರ್ ಸಿನಿಮಾದ ಭಾಗ 1 ಕೂಡ ಐದನೇ ವಾರಾಂತ್ಯದಲ್ಲಿ 33.25 ಕೋಟಿ ರೂ.ಗಳನ್ನಷ್ಟೇ ದಾಖಲಿಸಿತ್ತು. ಇದೀಗ ‘ಹನುಮಾನ್ ಅಂಶ್’ ಆ ಸಂಖ್ಯೆಯನ್ನೂ ಮೀರಿಸಿದೆ. ‘ಧುರಂಧರ್’ ಸಿನಿಮಾಗಿಂತ 16 ಕೋಟಿ ರೂ. ಹೆಚ್ಚು ಗಳಿಕೆ ಮಾಡಿದೆ. ಅಂದರೆ ಸಣ್ಣ ಬಜೆಟ್ನಲ್ಲಿ ತಯಾರಿಸಲಾದ ಸಿನಿಮಾವೊಂದು ಐದನೇ ವಾರದ ಗಳಿಕೆಯಲ್ಲಿ ಆದಿತ್ಯ ಧರ್ ಅವರ ಎರಡೂ ಸಿನಿಮಾಗಳ ವಾರಾಂತ್ಯದ ಗಳಿಕೆಯನ್ನು ಮೀರಿಸಿದೆ.
ತನ್ನ ಐದನೇ ವಾರಾಂತ್ಯದಲ್ಲಿ ಒಟ್ಟು ಗಳಿಕೆಯಲ್ಲೂ ‘ಧುರಂಧರ್’ ಮತ್ತು ‘ಧುರಂಧರ್ 2’ ಎರಡೂ ಸಿನಿಮಾಗಳ ಒಟ್ಟು ಗಳಿಕೆಯನ್ನು ಮೀರಿಸಿದೆ. ‘ಹನುಮಾನ್ ಅಂಶ್’ನ ಐದನೇ ವಾರಾಂತ್ಯದ ಗಳಿಕೆ 49.25 ಕೋಟಿ ರೂ.ಗಳಾಗಿದ್ದರೆ, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಒಟ್ಟು ಐದನೇ ವಾರಾಂತ್ಯದ ಗಳಿಕೆ 45.80 ಕೋಟಿ ರೂ.ಗಳಾಗಿವೆ. ಹೀಗಾಗಿ ಎರಡು ಸಿನಿಮಾಗಳ ಒಟ್ಟು ಗಳಿಕೆಗಿಂತ ‘ಹನುಮಾನ್ ಅಂಶ್’ 3.45 ಕೋಟಿ ಹೆಚ್ಚು ಗಳಿಕೆ ಮಾಡಿದೆ.
ಎರಡೂ ‘ಧುರಂಧರ್’ ಸಿನಿಮಾಗಳು ತಾರಾಗಣದ ಮೇಲೆ ಸವಾರಿ ಮಾಡಿದ ಬ್ಲಾಕ್ಬಸ್ಟರ್ಗಳಾಗಿದ್ದವು. ಆದರೆ ‘ಹನುಮಾನ್ ಅಂಶ್’ ಹೋಲಿಸಿ ನೋಡಿದಲ್ಲಿ ಸಾಧಾರಣ ಆರಂಭವನ್ನು ಕಂಡರೂ ಪ್ರೇಕ್ಷಕರ ಆಸಕ್ತಿ ಮತ್ತು ಬಾಯಿಮಾತಿನ ಪ್ರಚಾರದ ಮೇಲೆ ತನ್ನ ವ್ಯವಹಾರವನ್ನು ನಿರ್ಮಿಸಿಕೊಂಡಿದೆ.
ದೀರ್ಘಕಾಲ ಓಡಿದ ಸಿನಿಮಾ
‘ಧುರಂಧರ್’ ಸಿನಿಮಾದ ಮೊದಲ ಭಾಗವು ದೀರ್ಘ ಕಾಲ ಓಡಿದ ಸಿನಿಮಾವೆನ್ನುವ ಹೆಗ್ಗಳಿಕೆ ಸಾಧಿಸಿತ್ತು. ಅದರ ಐದನೇ ವಾರಾಂತ್ಯವು ಒಟ್ಟು 33.25 ಕೋಟಿ ರೂ. ನಿವ್ವಳ ಗಳಿಕೆ ದಾಖಲಿಸಿತ್ತು. ಹೀಗಾಗಿ ಐದನೇ ವಾರಾಂತ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಿಂದಿ ಸಿನಿಮಾ ಎನ್ನುವ ಖ್ಯಾತಿ ಗಳಿಸಿತ್ತು. ಇದೀಗ ‘ಹನುಮಾನ್ ಅಂಶ್’ ಈ ಮಾನದಂಡವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ.
ಈ ಸಿನಿಮಾ ಐದನೇ ಶುಕ್ರವಾರ 10 ಕೋಟಿ ರೂ. ಗಳಿಸಿದ ನಂತರ ಶೇ 65ರಷ್ಟು ಹೆಚ್ಚು ಗಳಿಕೆ ಸಾಧಿಸಿ ಶನಿವಾರದಂದು 16.50 ಕೋಟಿ ರೂ. ಮತ್ತು ಶೇ 37.9 ರಷ್ಟು ಹೆಚ್ಚು ಸಾಧನೆ ಮಾಡಿ ರವಿವಾರದಂದು 22.75 ಕೋಟಿ ರೂ. ಗಳಿಕೆ ದಾಖಲಿಸಿದೆ.
150 ಕೋಟಿ ರೂ. ಮೀರಿ ಗಳಿಸಿದ 2 ಕೋಟಿ ಸಿನಿಮಾ
31ನೇ ದಿನದ ಅಂತ್ಯದ ವೇಳೆಗೆ ‘ಹನುಮಾನ್ ಅಂಶ್’ ಭಾರತದಲ್ಲಿ ಒಟ್ಟು 122.13 ಕೋಟಿ ರೂ.ಗಳ ನಿವ್ವಳ ಗಳಿಕೆ ಸಾಧಿಸಿ. ಈ ಸಿನಿಮಾ ಮೊದಲ ನಾಲ್ಕು ವಾರಗಳಲ್ಲಿ 82.88 ಕೋಟಿ ರೂ.ಗಳ ಗಳಿಕೆ ಸಾಧಿಸಿದೆ. ನಂತರ ಕೇವಲ ಮೂರು ದಿನಗಳಲ್ಲಿ 39.25 ಕೋಟಿ ರೂ. ಸೇರಿಸಿತು. 32ನೇ ದಿನದಂದು ಭಾರತದ ಗಳಿಕೆಯಲ್ಲಿ 150 ಕೋಟಿ ರೂ.ಗಳನ್ನು ದಾಟಿದೆ.






