ರಹಸ್ಯ ಹೇಳುತ್ತೇನೆ ಎಂದು ಸಿಲಿಂಡರ್ ಲಿಂಕ್ ಹಂಚಿಕೊಂಡ ನಟ ಉಪೇಂದ್ರ!

Photo credit: X/@nimmaupendra, freepik.com
ರಹಸ್ಯ ಹೇಳುತ್ತೇನೆ ಎಂದು ಅಭಿಮಾನಿಗಳನ್ನು ಚಿಂತನೆಗೆ ಹಚ್ಚಿದ್ದರು ರಿಯಲ್ ಸ್ಟಾರ್ ಉಪೇಂದ್ರ!
ಹಿರಿಯ ನಟ ಉಪೇಂದ್ರ ಮಾರ್ಚ್ 14ರಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಹಾಕಿ ಮಾರ್ಚ್ 15ರಂದು ಸೀಕ್ರೇಟ್ ಲಿಂಕ್ ಕೊಡುವುದಾಗಿ ತಿಳಿಸಿದ್ದರು. ಇದೀಗ ಅವರು ಸೀಕ್ರೇಟ್ ಲಿಂಕ್ ನಲ್ಲಿ ಸಿಲಿಂಡರ್ ಫೋಟೋ ಹಂಚಿಕೊಂಡಿದ್ದಾರೆ.
ಸಿಲಿಂಡರ್ ಲಿಂಕ್ ಹಂಚಿಕೊಂಡ ನಟ
“ಎಚ್ಚರಿಕೆ!!! "ನಾಳೆ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ. ಇದನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ಅಂತ ನನಗೆ ಸೂಚನೆ ಇದೆ, ಹಾಗಾಗಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡಿದ್ರೂ ಮಾಡಬಹುದು. ನೀವು ಇದನ್ನ ನೋಡಿದ್ರೆ ಬೇರೆ ಯಾರ ಹತ್ತಿರವೂ ಹೇಳ್ಬೇಡಿ. ಸದ್ಯಕ್ಕೆ ಇದು ನಮ್ಮ ನಡುವೆ ಮಾತ್ರ ಇರಲಿ. ಲಿಂಕ್ ನೋಡಿ ಸುಮ್ಮನಿದ್ದುಬಿಡಿ" ಎಂದು ಅಭಿಮಾನಿಗಳನ್ನು ಚಿಂತನೆಗೆ ಹಚ್ಚಿದ್ದರು ರಿಯಲ್ ಸ್ಟಾರ್ ಉಪೇಂದ್ರ.
ಇಂದು ಬೆಳಗ್ಗೆ ಹತ್ತುಗಂಟೆಗೆ ಸರಿಯಾಗಿ ಅವರು ಸಿಲಿಂಡರ್ ಫೋಟೋ ಇರುವ ಲಿಂಕ್ ಹಂಚಿಕೊಂಡಿದ್ದಾರೆ. ಅದಾದ ಮೇಲೆ ಒಂದೆರಡು ಗಂಟೆಗಳ ನಂತರ ಇನ್ನೊಂದು ಪೋಸ್ಟ್ ಮಾಡಿರುವ ಉಪೇಂದ್ರ “ಕಾದು ನೋಡಿ” ಎಂದು ಬರೆದಿದ್ದಾರೆ.
ಅಭಿಮಾನಿಗಳ ನಡುವೆ ವೈರಲ್ ಆದ ಪೋಸ್ಟ್
ನಟ ಉಪೇಂದ್ರ ಅವರು ಕಳುಹಿಸಿರುವ ಹೆಸರಿಲ್ಲದ ಖಾಲಿ ಸಿಲಿಂಡರ್ ಫೋಟೋ ನೋಡಿದ ಅಭಿಮಾನಿಗಳು ವಿವಿಧ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸ್ವಾಮಿ ಪಟೇಲ್ರು ಎನ್ನುವವರು ಇಂತಹ ಪೋಸ್ಟ್ ಮಾಡಿದ್ದಕ್ಕಾಗಿ ಉಪೇಂದ್ರ ಅವರ ಕಾಲೆಳೆದಿದ್ದು, “ಉಪೇಂದ್ರ ಸರ್, ಇವೆಲ್ಲಾ ಈಗ ಔಟ್ಡೇಟೆಡ್. ನಾವು ಚಿಕ್ಕ ಹುಡುಗರಿದ್ದಾಗ ಇವೆಲ್ಲ ಭಯಂಕರ ಹೊಸತು ಅನ್ನಿಸ್ತಿತ್ತು, ಈಗ ಜನರೇಶನ್ ಚೇಂಜ್ ಆಗಿದೆ. ನಿಮ್ಮ ಎ, ಉಪೇಂದ್ರ ಮೊದಲಾದ ಒಂದು ಸಿನಿಮಾ ಬರ್ಲಿ. ನಾವು ವೈಟ್ ಮಾಡ್ತಾ ಇದ್ದೀವಿ. ಕಾಲಕ್ಕೆ ತಕ್ಕಂತೆ ಬದಲಾಗಿ. ಇಂತಿ ನಿಮ್ಮ ಅಭಿಮಾನಿ” ಎಂದು ಬರೆದುಕೊಂಡಿದ್ದಾರೆ.
ಇನ್ನು ಕೆಲವರು ಉಪೇಂದ್ರರನ್ನು ಮುಖ್ಯಮಂತ್ರಿಯಾಗಿ ನೋಡಲು ಬಯಸಿರುವುದಾಗಿ ಬರೆದುಕೊಂಡಿದ್ದಾರೆ. ಬಹುತೇಕ ಅಭಿಮಾನಿಗಳು ಕಾಲ ಬದಲಾಗಿದೆ ಮತ್ತು ಹುಚ್ಚು ಪ್ರಯತ್ನ ಬಿಡಿ ಮೊದಲಾಗಿ ಸಲಹೆ ನೀಡಿದ್ದಾರೆ.
ಎಚ್ಚರಿಕೆ ⚠️ !!!
— Upendra (@nimmaupendra) March 14, 2026
"ನಾಳೆ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ.
ಇದನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ಅಂತ ನನಗೆ ಸೂಚನೆ ಇದೆ,
ಹಾಗಾಗಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡಿದ್ರೂ ಮಾಡಬಹುದು."
"ನೀವು ಇದನ್ನ ನೋಡಿದ್ರೆ ಬೇರೆ ಯಾರ ಹತ್ತಿರವೂ ಹೇಳ್ಬೇಡಿ. ಸದ್ಯಕ್ಕೆ ಇದು ನಮ್ಮ ನಡುವೆ ಮಾತ್ರ ಇರಲಿ.…
— Upendra (@nimmaupendra) March 15, 2026
ಕಾದು ನೋಡಿ……
— Upendra (@nimmaupendra) March 15, 2026
Wait and watch….






