‘ಹಂಟ್ಫಾರ್ ವೀರಪ್ಪನ್’ ನಿರ್ಮಾಪಕರು ಕಂಡುಕೊಂಡ ರಹಸ್ಯಗಳೇನು?

ದಿ ಹಂಟ್ ಫಾರ್ ವೀರಪ್ಪನ್
1990 ಮತ್ತು 2000ನೇ ದಶಕದಲ್ಲಿ ಕರ್ನಾಟಕ ಹಾಗೂ ತಮಿಳುನಾಡನ್ನು ಸಿಂಹಸ್ವಪ್ನವಾಗಿ ಕಾಡಿದ್ದ ವೀರಪ್ಪನ್ ಬಗೆಗಿನ ನಾಲ್ಕು ಭಾಗಗಳ ಸಾಕ್ಷ್ಯಚಿತ್ರ ಸರಣಿ 'ದಿ ಹಂಟ್ ಫಾರ್ ವೀರಪ್ಪನ್'ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ನಿರ್ದೇಶಕ ಸೆಲ್ವಮಣಿ ಸೆಲ್ವರಾಜ್ ಮತ್ತು ನಿರ್ಮಾಪಕರಾದ ಅಪೂರ್ವ ಬಕ್ಷಿ ಹಾಗೂ ಮೊನಿಶಾ ತ್ಯಾಗರಾಜನ್ ಅವರು, ವಿಶೇಷ ಸಂದರ್ಶನವೊಂದರಲ್ಲಿ, ವೀರಪ್ಪನ್ ಇತಿಹಾಸ, ರಾಜಕೀಯ ಮತ್ತು ತತ್ವಗಳ ಬಗೆಗೆ ಶೋಧನೆ ಮಾಡುವ ಪ್ರಯತ್ನದಲ್ಲಿ ಇರುವುದಾಗಿ ಹೇಳಿದ್ದಾರೆ. ಈ ತಂಡ ಅಂತರಾಷ್ಟ್ರೀಯ ಎಮ್ಮಿ ಅವಾರ್ಡ್ ವಿಜೇತ ಕಾಲ್ಪನಿಕ ಕಥಾನಕ ಸರಣಿ ‘ಡೆಲ್ಲಿ ಕ್ರೈಮ್ಸ್’ ನ ಚಾಲನಾಶಕ್ತಿಯಾಗಿತ್ತು.
ಸಹಜವಾಗಿಯೇ ವೀರಪ್ಪನ್ ಬಗ್ಗೆ ಜನರಿಗೆ ಇದ್ದ ತಿಳಿವಳಿಕೆ ಕಡಿಮೆ. ಆ ವ್ಯಕ್ತಿ ಹಾಗಾಗಿದ್ದು ಹೇಗೆ, ದೊಡ್ಡ ಅಪರಾಧಿಯಾಗಿ ರೂಪುಗೊಂಡಿದ್ದು ಏಕೆ ಎಂದು ತಿಳಿಯುವ ಕುತೂಹಲ ವೈಯಕ್ತಿಕವಾಗಿ ನನಗೆ ಇತ್ತು. ಇನ್ನೊಂದೆಡೆ ಹೇಗೆ ಅತನನ್ನು ಪ್ರೀತಿಸುತ್ತಿದ್ದರು ಎನ್ನುವುದನ್ನೂ ತಿಳಿಯುವ ಕಾತರ ಇತ್ತು. ಹಲವು ಮಂದಿಯನ್ನು ಹಾಗೂ ಪ್ರಾಣಿಗಳನ್ನು ಕೊಂದರೂ ಸಮಾಜದ ಒಂದು ವರ್ಗಕ್ಕೆ ಆತ ಹೀರೊ. ಈ ಎರಡೂ ಮುಖಗಳನ್ನು ತಿಳಿಯುವುದು ನನ್ನ ಉದ್ದೇಶವಾಗಿತ್ತು. ವೀರಪ್ಪನ್ನನ್ನು ತಿಳಿದುಕೊಳ್ಳಬೇಕಾದರೆ, ಆತನ ಬದುಕಿನಲ್ಲಿ ಬಂದ ಎಲ್ಲರನ್ನೂ ನಾವು ತಿಳಿದುಕೊಳ್ಳಬೇಕಾಗುತ್ತದೆ. ಇದು ಈ ನಮ್ಮ ಶೋಧನೆಯ ಪಯಣದಲ್ಲಿ ಸರಳ ಹುಡುಕಾಟ ಎಂದು ಸೆಲ್ವಮಣಿ ಬಣ್ಣಿಸಿದ್ದಾರೆ.
"ವೀರಪ್ಪನ್ ಬಗ್ಗೆ ಸಾಕಷ್ಟು ಸರಕುಗಳಿವೆ. ಆದರೆ ಯಾವುದು ಕೂಡಾ ಅಧಿಕೃತ ಅಲ್ಲ. ಆ ವ್ಯಕ್ತಿಯ ಸಮಗ್ರ ಚಿತ್ರಣವನ್ನು ಪ್ರಸ್ತುತಪಡಿಸಲಾಗದು. ಅದ್ದರಿಂದ ಸತ್ಯ ಬಯಲಿಗೆಳೆಯುವ ಪ್ರಯತ್ನ ಮಾಡಿದ್ದೇವೆ" ಎಂದು ಅಪೂರ್ವ ಹೇಳುತ್ತಾರೆ.
"ಅವರ ಪತ್ನಿ ಹೇಳಿದ್ದನ್ನು ಯಾರೂ ಹೇಳಲಾಗದು. ಆತನ ಬದುಕಿನ ಭಿನ್ನ ಹಂತಗಳಲ್ಲಿ ಗ್ಯಾಂಗ್ ಸದಸ್ಯರಿದ್ದರೂ, ಅವರ ಸಾಮಿಪ್ಯದಿಂದ ಮತ್ತು ವೈಯಕ್ತಿಕವಾಗಿ ನೋಡಿದಾಗ ಆತನ ಸಂಪರ್ಕಕ್ಕೆ ಬಂದಿದ್ದಳು. ಆಕೆ ಕೂಡಾ ಸಾಕಷ್ಟು ಸಮಯವನ್ನು ಅರಣ್ಯದಲ್ಲಿ ಕಳೆದಿದ್ದಾಳೆ. ಆತನಿಂದ ಬೇರೆ ಇದ್ದಾಗಲೂ ಹೇಗೋ ಸಂಪರ್ಕ ಸಾಧಿಸುತ್ತಿದ್ದಳು. ಆಕೆಯ ಹೃದಯಕ್ಕೆ ಹತ್ತಿರವಾದ ಅಂಶಗಳನ್ನು ಹಂಚಿಕೊಳ್ಳಲು ಸೂಕ್ತ ಮಾಧ್ಯಮ ಹುಡುಕುತ್ತಿದ್ದಳು ಎನ್ನುವುದು ನನ್ನ ಭಾವನೆ. ಈ ಕಥೆಯಲ್ಲಿ ಮಹಿಳೆ ಕೂಡಾ ಕಾಣಿಸಿಕೊಳ್ಳುತ್ತಾಳೆ" ಎಂದು ಮೊನಿಶಾ ವಿವರಿಸಿದರು.
ಹಲವು ಮಂದಿ ಅರಣ್ಯ ಅಧಿಕಾರಿಗಳನ್ನೂ ಸಂಪರ್ಕಿಸಿ ಕಥೆ ಹೊರಗೆಳೆದ ಬಗೆ ಹೇಗೆ ಎಂಬ ಪ್ರಶ್ನೆಗೆ, "ವೀರಪ್ಪನ್ ತವರೂರು ಗೋಪಿನಾಥನ್ ನಮ್ಮ ಆರಂಭದ ಕೇಂದ್ರ. ಆತನ ಆರಂಭಿಕ ಜೀವನದ ಬಗ್ಗೆ ಮಾಹಿತಿ ಸಿಕ್ಕಿತು. ಒಬ್ಬರಿಂದ ಒಬ್ಬರ ಸಂಪರ್ಕ ಸಾಧ್ಯವಾಯಿತು" ಎಂದು ಸೆಲ್ವಮಣಿ ಹೇಳಿದರು.
ಕರ್ನಾಟಕ ತಮಿಳುನಾಡಿನ ಗಡಿಭಾಗದ ಆಯಕಟ್ಟಿನ ಪ್ರದೇಶವನ್ನು ತನ್ನ ಕಾರ್ಯಾಚರಣೆಗೆ ಬಳಸಿಕೊಂಡಿದ್ದ ವೀರಪ್ಪನ್ ರಾಜಕೀಯ ಚತುರನೇ ಎಂಬ ಪ್ರಶ್ನೆಗೆ, "ಪ್ರತಿಯೊಬ್ಬರಲ್ಲೂ ರಾಜಕೀಯ ಅಂಶ ಇದೆ. ಇದಕ್ಕೆ ನೀವು ಓದಿರಬೇಕಿಲ್ಲ. ಕೆಲವೊಮ್ಮೆ ಜೀವನ ನಿಮಗೆ ರಾಜಕೀಯ ಕಲಿಸುತ್ತದೆ. ಆಕೆಯ ಅಭಿಪ್ರಾಯಗಳಲ್ಲಿ ಮುತ್ತುಲಕ್ಷ್ಮಿ ತೀರಾ ರಾಜಕೀಯ ವ್ಯಕ್ತಿ ಎನಿಸುತ್ತದೆ. ಕೇವಲ ಅಸ್ತಿತ್ವವೇ ಆಕೆಗೆ ಬಳಹಷ್ಟು ರಾಜಕೀಯ ಅಂಶಗಳನ್ನು ಕಲಿಸಿದೆ. ವೀರಪ್ಪನ್ ತಮಿಳುನಾಡಿನಲ್ಲಿ ಇಮೇಜ್ ಬೆಳೆಸಿಕೊಳ್ಳುವ ಗುರಿ ಹೊಂದಿದ್ದ. ಅದರಲ್ಲಿ ಯಶಸ್ಸನ್ನೂ ಕಂಡಿದ್ದ. ಆತನ ಬಂಧನ ಇರಲಿ, ನ್ಯಾಯಾಲಯ ಆದೇಶವಿರಲಿ ಎಲ್ಲವೂ ಶಕ್ತಿ ಕೇಂದ್ರಗಳಲ್ಲಿ ಚರ್ಚೆಯಾಗುತ್ತಿತ್ತು. ಆತನ ಬಂಧನ ಚುನಾವಣಾ ಪ್ರನಾಳಿಕೆಯೂ ಆಯಿತು. ಆತ ಜನ್ಮಜಾತ ರಾಜಕಾರಣಿ” ಎಂದು ಸೆಲ್ವಮಣಿ ಉತ್ತರಿಸಿದರು.







