ಬೇಡಿಕೆ ಈಡೇರಿಸಲು ಆಗ್ರಹಿಸಿ ಎಐಟಿಯುಸಿ ಪ್ರತಿಭಟನೆ

ಮಂಗಳೂರು: ಕನಿಷ್ಟ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆಯನ್ನು ತಕ್ಷಣ ಹೊರಡಿಸಬೇಕು, ವೈಜ್ಞಾನಿಕ ವಾಗಿ ಕನಿಷ್ಟಕೂಲಿ ಜಾರಿಗೊಳಿಸಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಎಐಟಿಯುಸಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿತು.
ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಸೀತಾರಾಂ ಬೇರಿಂಜ, ಉಪಾಧ್ಯಕ್ಷ ಬಿ.ಶೇಖರ್ ಮಾತನಾಡಿದರು. ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ ಸ್ವಾಗತಿಸಿದರು. ಶಮಿತ ಬಿಸಿ ರೋಡ್ ವಂದಿಸಿದರು.
ಎಐಟಿಯುಸಿ ಜಿಲ್ಲಾ ಕೋಶಾಧಿಕಾರಿ ಎ.ಪ್ರಭಾಕರ್ ರಾವ್, ಮಾಜಿ ಅಧ್ಯಕ್ಷ ವಿ.ಕುಕ್ಯಾನ್, ಸಹ ಕಾರ್ಯದರ್ಶಿ ಕರುಣಾಕರ್ ಮಾರಿಪಲ್ಲ, ಹರ್ಷಿತ್ ಬಂಟ್ವಾಳ, ಕೃಷ್ಣಪ್ಪ ಪಿಲಿಕುಲ, ಸುಧಾಕರ್ ಕಲ್ಲೂರು, ಗೀತಾ ಬಜಾಲ್, ರೇವತಿ ಎಳಿಂಜೆ, ಮೀನಾಕ್ಷಿ ಶಾಂತಿಪಲ್ಕೆ, ವಾರಿಜ ಬರ್ವ, ಭಾರತಿ ಪ್ರಶಾಂತ್, ಮೋಹನ ಅರಳ, ಕುಸುಮ ಕಲ್ಲಿಗೆ, ಮೋಹಿನಿ, ಜಯಂತ, ಎಂ.ಬಿ.ಭಾಸ್ಕರ್ ನೇತೃತ್ವ ವಹಿಸಿದರು.
*ಮಣಿಪಾಲದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕಾರ್ಮಿಕ ನಿರೀಕ್ಷಕರ ಮೂಲಕ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ವಿ.ಸೀತಾರಾಂ ಬೇರಿಂಜ, ಬಿ.ಶೇಖರ್, ಸುರೇಶ್ ಕುಮಾರ್, ವಿ.ಕುಕ್ಯಾನ್, ಕರುಣಾಕರ್, ಉಡುಪಿಯ ಎಐಟಿಯುಸಿ ನಾಯಕರಾದ ಶಿವಾನಂದ, ಶಶಿಕಲ ಗಿರೀಶ್, ಸುಚಿತ್ರ ಶೆಟ್ಟಿ, ಅಪ್ಪಿ, ಭೂಪೇಶ್ ಪಾಲನ್ ಉಪಸ್ಥಿತರಿದ್ದರು.





