ಎಸ್‌ವೈಎಸ್ ಬಂಟ್ವಾಳ ಝೋನ್ ವಾರ್ಷಿಕ ಕೌನ್ಸಿಲ್

ಬಂಟ್ವಾಳ: ಎಸ್‌ವೈಎಸ್ ಬಂಟ್ವಾಳ ಝೋನ್ ವಾರ್ಷಿಕ ಕೌನ್ಸಿಲ್ ಪಾಣೆಮಂಗಳೂರಿನ ಎಸ್.ಎಸ್ ಹಾಲ್‌ನಲ್ಲಿ ನಡೆಯಿತು. ಸಯ್ಯಿದ್ ಮುಶ್ತಾಖುರ‌್ರಹ್ಮಾನ್ ತಂಙಳ್ ದುಆ ನಡೆಸಿದರು. ಎಸ್‌ವೈಎಸ್ ಬಂಟ್ವಾಳ ರೆನ್ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಅಧ್ಯಕ್ಷತೆ ವಹಿಸಿದ್ದರು.
ಎಸ್‌ವೈಎಸ್ ದ.ಕ. ವೆಸ್ಟ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಕಾರ್ಯಕ್ರಮ ಉದ್ಘಾಟಿಸಿ ದರು. ಝೋನ್ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಕೊಳಕೆ ವರದಿ ವಾಚಿಸಿದರು. ಕೋಶಾಧಿಕಾರಿ ಅಶ್ರಫ್ ಪೆರಾಳ ಲೆಕ್ಕಪತ್ರ ವಾಚಿಸಿದರು.
ವೀಕ್ಷಕರಾಗಿ ಆಗಮಿಸಿದ ಎಸ್‌ವೈಎಸ್ ದ.ಕ. ವೆಸ್ಟ್ ಜಿಲ್ಲಾ ಉಪಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ತರಗತಿ ನಡೆಸಿದರು. ರಾಜ್ಯ ಉಪಾಧ್ಯಕ್ಷ ಇಬ್ರಾಹಿಂ ಖಲೀಲ್ ಮಾಲಿಕಿ ಶುಭಹಾರೈಸಿದರು. ಜಿಲ್ಲಾ ಕೋಶಾಧಿಕಾರಿ ರಝಾಕ್ ಭಾರತ್, ಜಿಲ್ಲಾ ನಾಯಕರಾದ ರಶೀದ್ ಹಾಜಿ ವಗ್ಗ, ಅಶ್ರಫ್ ನಾರ್ಶ ಮತ್ತಿತರರು ಉಪಸ್ಥಿತರಿದ್ದರು. ಎಸ್‌ವೈಎಸ್ ಝೋನ್ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಕೊಳಕೆ ಸ್ವಾಗತಿಸಿದರು.
Next Story




