ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ : ಭಾರತ್ ಸ್ಮ್ಯಾಶ್ ತಂಡ ಚಾಂಪಿಯನ್

ಮಂಗಳೂರು, ಜೂ.21: ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ನಡೆದ ಡಿಕೆಬಿಎ ಮೆಂಬರ್ಸ್ ಪ್ರೀಮಿಯರ್ ಲೀಗ್ ಸೀಸನ್-1 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತ್ ಸ್ಮ್ಯಾಶ್ ತಂಡವು ಸಿ.ಕೆ. ಗೋವಾ ವಿರುದ್ಧ 7-2 ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿ, ಚಾಂಪಿಯನ್ ಆಗಿ ಹೊರಹೊಮ್ಮುವುದರೊಂದಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ವಿವಿಧ ವಿಭಾಗಗಳಲ್ಲಿ ಜಯ ಗಳಿಸಿದವರ ವಿವರ ಇಂತಿವೆ:-
ಇಂಟರ್‌ಮಿಡಿಯಟ್: ಡಾ. ಶರತ್ ಮತ್ತು ಶಮಿತ್ , ಪ್ರೊಫೆಷನಲ್ಸ್: ಚೇತನ್ ಡಿ ಮತ್ತು ಡಾ. ಸತೀಶ್ಚಂದ್ರ , ವುಮೆನ್ಸ್ ಇಂಟರ್‌ಮಿಡಿಯೇಟ್: ಮಮತಾ ಆರ್ ಮತ್ತು ಸ್ನೇಹಾ , ಎಕ್ಸ್‌ಪರ್ಟ್ಸ್ : ವರುಣ್ ಮತ್ತು ಯಾಸಿರ್ ,ಎಲೈಟ್ ಐಕಾನ್: ಆರಿಫ್ ಮತ್ತು ರಝಾಕ್ ಶೇಟ್ , ಅಡ್ವಾನ್ಸ್‌ಡ್: ಹರ್ಷಿತ್ ಮತ್ತು ಸಂಜಯ್ ಶೆಟ್ಟಿ , ಅಮೆಚೂರ್: ಜೀವನ್‌ರಾಜ್ ಮತ್ತು ವಿಕ್ರಮ್ , ವುಮೆನ್ಸ್ ಎಲೈಟ್: ಅನುಶ್ರೀ ಮತ್ತು ಜುನೈದಾ , ಮಾಸ್ಟರ್ಸ್ : ರಫೀಕ್ ಪೊಕಾ ಮತ್ತು ಸಚೀಂದ್ರ (ಸಾಮ್ರಾಟ್) ಜಯ ಗಳಿಸಿದರು.
ಅಂತರ್‌ರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಆಯುಷ್ ಶೆಟ್ಟಿ ಟೂರ್ನಮೆಂಟ್‌ಗೆ ಚಾಲನೆ ನೀಡಿದ್ದರು. ರಾತ್ರೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಎ.ಕೆ.ಆಪಲ್ ಗ್ರೂಪ್‌ನ ಅಧ್ಯಕ್ಷ ಎ.ಕೆ.ನಿಯಾಝ್ ಪ್ರಶಸ್ತಿ ವಿತರಿಸಿದರು.
ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.






