ಸಿಎಂ ಡಿಕೆಶಿ ಮಾಧ್ಯಮ ಸಂವಹನ ಸಲಹೆಗಾರರಾಗಿ ದೀಪಕ್ ತಿಮ್ಮಯ ನೇಮಕ

ಮಂಗಳೂರು, ಸೆ.8: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಸಂವಹನ ಸಲಹೆಗಾರರಾಗಿ ಹಿರಿಯ ಪತ್ರಕರ್ತ ದೀಪಕ್ ತಿಮ್ಮಯ ನೇಮಕಗೊಂಡಿದ್ದಾರೆ.
ಇವರನ್ನು ಅಭಿನಂದಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪತ್ರಕರ್ತರ ಸಮುದಾಯಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಮಾಧ್ಯಮದ ಸೇತುವೆಯಾಗಿಯೂ ದೀಪಕ್ ಸೇವೆ ಮಾಡಲಿ ಎಂದು ಆಶಿಸಿ, ಶುಭ ಹಾರೈಸಿದ್ದಾರೆ.
Next Story




