ಅಲ್ ಖೈರ್ ಇಸ್ಲಾಮಿಕ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಮಂಗಳೂರು: ಅಲ್ ಖೈರ್ ಇಸ್ಲಾಮಿಕ್ ಇಂಗ್ಲಿಷ್ ಮೀಡಿಯಂ ಶಾಲೆ, ಸುರಲ್ಪಾಡಿಯಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷ ಮುಷ್ತಾಕ್ ಸಾದ್, ಕಾರ್ಯದರ್ಶಿ ಶೇಖ್ ಮುಖ್ತಾರ್, ಕೋಶಾಧಿಕಾರಿ ಶರೀಫ್ ಬಿ.ಎಸ್., ಜೊತೆ ಕಾರ್ಯದರ್ಶಿ ಅಶ್ರಫ್ ಆರ್.ಎಸ್., ಟ್ರಸ್ಟಿಗಳಾದ ಆರ್.ಎಸ್. ಮುಹಮ್ಮದ್, ಅಬ್ದುಲ್ ಖಾದರ್ ಹಾಗೂ ಟಿ.ಎಸ್. ಇಸ್ಮಾಯಿಲ್ ಬಾವ, ಮಲ್ಹರುಲ್ ಅವಾಕಿಫ್ ಜುಮ್ಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಸಾಗರ್, ರೇನ್‌ಬೋ ಉಸ್ಮಾನ್, ಶಾಲೆಯ ಮುಖ್ಯ ಶಿಕ್ಷಕಿ ಕಲಂದರ್ ಬೀವಿ, ಸದರ್ ಉಸ್ತಾದ್ ಇಲ್ಯಾಸ್ ನಿಝಾಮಿ ಉಪಸ್ಥಿತರಿದ್ದರು.
ಈ ಸಂದರ್ಭ ಶಾಲೆಯ ನೂತನ ಬ್ರೋಶರ್ ಬಿಡುಗಡೆ ಮಾಡಲಾಯಿತು. ಶಾಲೆಯಲ್ಲಿ ಶೇ.100 ಹಾಜರಾತಿ ದಾಖಲಿಸಿದ ಸೀಮಾ ಸಬೀನಾಳನ್ನು ಸನ್ಮಾನಿಸಲಾಯಿತು.
ಫರ್ಹಾನ್ ವಾಫಿ ದುಆಗೈದರು. ಶಿಕ್ಷಕಿ ಸಲಿಕತ್ ಸ್ವಾಗತಿಸಿದರು. ಇರ್ಫಾನ್ ಹುದವಿ ವಂದಿಸಿದರು.
Next Story




