ಮೇ 10: ದೇಶದ ಸೈನಿಕರಿಗಾಗಿ ಸರ್ವಧರ್ಮದ ಪ್ರಾರ್ಥನೆ; ಪೂರ್ವಭಾವಿ ಸಭೆ

ಮಂಗಳೂರು: ಕಾಶ್ಮೀರದಲ್ಲಿ ಉಗ್ರರು ನಡೆಸಿದ ಕೃತ್ಯವನ್ನು ಖಂಡಿಸಿ ಭಾರತ ದೇಶದ ಸೈನಿಕರು ನೀಡಿದ ಪ್ರತಿರೋಧವನ್ನು ಬೆಂಬಲಿಸಿ ಭಾರತದ ಸೈನಿಕರಿಗೆ ಧೈರ್ಯ ತುಂಬುವ ಮತ್ತು ಕೇಂದ್ರ ಸರಕಾರ ಕೈಗೊಂಡ ನಿರ್ಧಾರವನ್ನು ಬೆಂಬಲಿಸಿ ರಾಜ್ಯ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ನೇತೃತ್ವದಲ್ಲಿ ಮೇ 10ರಂದು ಸಂಜೆ 4ಕ್ಕೆ ನಗರದ ಪುರಭವನದ ಮುಂದಿನ ಸಾರ್ವಜನಿಕ ರಾಜಾಜಿ ಪಾರ್ಕ್ ಸಭಾಂಗಣದಲ್ಲಿ ದೇಶದ ಸೈನಿಕರಿಗಾಗಿ ಸರ್ವಧರ್ಮದ ಪ್ರಾರ್ಥನೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕಾಗಿ ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ಪ್ರಕಾಶ್ ಸಾಲ್ಯಾನ್, ನಾಗೇಂದ್ರ ಕುಮಾರ್, ಕೇಶವ ಮರೋಳಿ, ಅಮೃತ್ ಕದ್ರಿ, ಯು.ಪಿ. ಇಬ್ರಾಹಿಂ, ಸಿರಾಜ್ ಬಜ್ಪೆ, ಮೆಲ್ವಿನ್ ಕ್ಯಾಸ್ತಲಿನೋ, ಇಮ್ರಾನ್ ಕುದ್ರೋಳಿ, ಭಾಸ್ಕರ್ ರಾವ್, ಮನುರಾಜ್ , ಆಲ್ಟನ್ ಡಿಕುನ್ಹಾ, ವಸಂತ್ ಶೆಟ್ಟಿ ವೀರನಗರ, ಚಂದ್ರಹಾಸ ಕೋಡಿಕಲ್, ಮಂಜುಳಾ ನಾಯಕ್, ಶಾಂತಲಾ ಗಟ್ಟಿ ಉಪಸ್ಥಿತರಿದ್ದರು.
Next Story





