ಪೇರಡ್ಕ ಗೂನಡ್ಕ ತಕ್ವಿಯತುಲ್ ಇಸ್ಲಾಂ ಮದ್ರಸಕ್ಕೆ ಶೇ.100 ಫಲಿತಾಂಶ

ಸುಳ್ಯ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಮದ್ರಸ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಪೇರಡ್ಕ ಗೂನಡ್ಕದ ತೆಕ್ಕಿಲ್ ಮುಹಮ್ಮದ್ ಹಾಜಿ ಮೆಮೊರಿಯಲ್ ತಖ್ವಿಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿಗಳು ಶೇ.100 ಫಲಿತಾಂಶ ದಾಖಲಿಸಿದ್ದಾರೆ.
ಈ ಪೈಕಿ ಹತ್ತನೇ ತರಗತಿಯ ಆಯಿಶಾ ಟಿ.ಎಂ, ಏಳನೇ ತರಗತಿಯ ಫಾತಿಮತ್ ಝುಲ್ಫಾ, ರಝೀನಾ ಡಿ.ಎಚ್., ಮರ್ಯಂ ರಿಳಾ, ಐದನೇ ತರಗತಿಯ ಶನಾ ಫಾತಿಮಾ, ಫಾತಿಮತ್ ಶೈಬಾ ಮತ್ತು ಅಬ್ದುಲ್ ಹಾದಿ ಡಿಸ್ಟಿಂಕ್ಷನ್ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಆರು ಮಂದಿ ಪ್ರಥಮ ಮತ್ತು ಇಬ್ಬರು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





