ಸಮಸ್ತ 100ನೇ ವಾರ್ಷಿಕ ಮಹಾಸಮ್ಮೇಳನದ ಸ್ವಾಗತ ಸಮಿತಿ ರಚನೆ

ಮಂಗಳೂರು: ಕಾಸರಗೋಡಿನ ಕುಣಿಯ ಎಂಬಲ್ಲಿ 2026 ಫೆ.4ರಿಂದ 8ರ ತನಕ "ಆದರ್ಶ ಪರಿಶುದ್ಧತೆ ಶತಮಾನಗಳಿಂದ..." ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುವ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ 100ನೇ ವಾರ್ಷಿಕ ಅಂತಾರಾಷ್ಟ್ರೀಯ ಮಹಾ ಸಮ್ಮೇಳನದ ಪ್ರಚಾರಾರ್ಥ ಪಾಣೆ ಮಂಗಳೂರು ಅಕ್ಕರಂಗಡಿಯಲ್ಲಿರುವ ಎಚ್.ಎಚ್. ಸೆಂಟರ್‌ನ ಸಭಾಂಗಣದಲ್ಲಿ ದ.ಕ. ಜಿಲ್ಲಾ ಮಟ್ಟದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸಮಸ್ತ ಕರ್ನಾಟಕ ಮುಶಾವರದ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಸಭೆಯ ನೇತೃತ್ವ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಸಭೆ ಯನ್ನು ಉದ್ಘಾಟಿಸಿದರು. ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಜನರಲ್ ಮ್ಯಾನೇಜರ್ ಮುಹೀನ್ ಕುಟ್ಟಿ ಮಾಸ್ಟರ್ ವಿಷಯ ಮಂಡಿಸಿದರು.
ವೇದಿಕೆಯಲ್ಲಿ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ, ಕೆ.ಪಿ.ಎಂ ಶರೀಫ್ ಫೈಝಿ ಕಡಬ, ಮೂಸಲ್ ಫೈಝಿ ಕಕ್ಕಿಂಜೆ, ತ್ವಾಹಾ ಜಿಫ್ರಿ ತಂಙಳ್, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಸೈಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ಕಿನ್ಯಾ, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಅಕ್ರಮ್ ಅಲಿ ತಂಙಳ್ ಪುತ್ತೂರು, ಉಮರ್ ಫೈಝಿ ಸಾಲ್ಮರ, ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಎಂ.ಎಚ್. ಮುಹಿಯುದ್ದೀನ್ ಹಾಜಿ ಅಡ್ಡೂರು, ಇರ್ಷಾದ್ ದಾರಿಮಿ ಮಿತ್ತಬೈಲು, ಸಮಸ್ತ ವಿದ್ಯಾಭ್ಯಾಸ ಮಂಡಳಿ ಸದಸ್ಯ ರಶೀದ್ ಹಾಜಿ ಪರ್ಲಡ್ಕ, ಮುಹಮ್ಮದ್ ಹಫೀಝ್ ಅಕ್ಕರಂಗಡಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ನಿರ್ದೇಶಕರಾಗಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ, ಇಸ್ಮಾಯಿಲ್ ಫೈಝಿ, ಮೂಸಲ್ ಫೈಝಿ, ಆದಂ ದಾರಿಮಿ ಅಜ್ಜಿಕಟ್ಟೆ, ಜಿ. ಅಬೂಬಕರ್ ಹಾಜಿ ಗೋಳ್ತಮಜಲು, ಶಾಹುಲ್ ಹಮೀದ್ ಹಾಜಿ ಮೆಟ್ರೋ, ಕೆ.ಎಸ್. ಇಸ್ಮಾಯಿಲ್ ಹಾಜಿ ಕಲ್ಲಡ್ಕ, ಮುಹಮ್ಮದ್ ಹನೀಫ್ ಹಾಜಿ ಮಂಗಳೂರು, ಐ. ಮೊಯ್ದಿನಬ್ಬ ಹಾಜಿ ಮಂಗಳೂರು, ಅಧ್ಯಕ್ಷರಾಗಿ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಕಾರ್ಯಾಧ್ಯಕ್ಷರಾಗಿ ಕೆ.ಎಂ ಉಸ್ಮಾನುಲ್ ಫೈಝಿ ತೋಡಾರು, ಪ್ರಧಾನ ಸಂಚಾಲಕರಾಗಿ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ, ಕೋಶಾಧಿಕಾರಿಯಾಗಿ ಎಂ.ಎಚ್. ಮುಹಿಯುದ್ದೀನ್ ಹಾಜಿ ಅಡ್ಡೂರು, ವರ್ಕಿಂಗ್ ಕನ್ವೀನರಾಗಿ ಖಾಸಿಂ ದಾರಿಮಿ ಸವಣೂರು, ರಫೀಕ್ ಕೊಡಾಜೆ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಅನೀಸ್ ಕೌಸರಿ ಕುಂಬ್ರ, ಮೂಸಾ ದಾರಿಮಿ ಕಕ್ಕಿಂಜೆ, ಅಬ್ದರ‌್ರಶೀದ್ ರಹ್ಮಾನಿ ಪರ್ಲಡ್ಕ, ಶಂಸುದ್ದೀನ್ ದಾರಿಮಿ ಗಾಳಿಮುಖ, ಉಮರ್ ದಾರಿಮಿ ಸಾಲ್ಮರ, ಕೋ-ಆರ್ಡಿನೇಟ ರಾಗಿ ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಫೈನಾನ್ಸಿಯಲ್ ಅಧ್ಯಕ್ಷರಾಗಿ ಮುಹಮ್ಮದ್ ಪನೀರ್ ದೇರಳಕಟ್ಟೆ, ಕನ್ವೀನರಾಗಿ ಅಬ್ದುಲ್ ಹಕೀಮ್ ಪರ್ತಿಪ್ಪಾಡಿ, ಕೋಶಾಧಿಕಾರಿ ಯಾಗಿ ಅಬೂಬಕರ್ ಮಂಗಳಂ, ವೇದಿಕೆ ಮತ್ತು ಧ್ವನಿ ಸಮಿತಿಯ ಅಧ್ಯಕ್ಷರಾಗಿ ಹಮೀದ್ ಕಣ್ಣೂರು, ಸಂಚಾಲಕರಾಗಿ ಮುಸ್ತಫಾ ಕಟ್ಟದಪಡ್ಪು, ಅತಿಥಿ ಸ್ವೀಕಾರ ಸಮಿತಿಯ ಅಧ್ಯಕ್ಷರಾಗಿ ಅಬೂಬಕರ್ ಸಿದ್ದೀಕ್ ದಾರಿಮಿ ಒಮಾನ್, ಸಂಚಾಲಕರಾಗಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಸ್ವಯಂ ಸೇವಕರ ಸಮಿತಿಯ ಅಧ್ಯಕ್ಷರಾಗಿ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಸಂಚಾಲಕರಾಗಿ ಅಶ್ರಫ್ ಶೇಡಿಗುಂಡಿ, ಕ್ಯಾಂಪ್ ಅಧ್ಯಕ್ಷರಾಗಿ ಝುಬೈರ್ ದಾರಿಮಿ ಅಕ್ಕರಂಗಡಿ, ಸಂಚಾಲಕರಾಗಿ ಆಬೂಸಾಲಿಹ್ ಫೈಝಿ ತುಂಬೆ, ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ, ಸಂಚಾಲಕರಾಗಿ ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಸಪ್ಲಿಮೆಂಟ್ ಅಧ್ಯಕ್ಷರಾಗಿ ಕೆ.ಎಸ್. ಹೈದರ್ ದಾರಿಮಿ ಕರಾಯ, ಸಂಚಾಲಕ ರಾಗಿ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಮಾಧ್ಯಮ ಸಮಿತಿಯ ಅಧ್ಯಕ್ಷರಾಗಿ ನಿಯಾಝ್ ನಿಝಾಮಿ ಪರಪ್ಪು, ಕೌಸರ್ ಪುಂಜಾಲಕಟ್ಟೆ ಹಾಗೂ 1001 ಮಂದಿಯನ್ನು ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸ್ವಾಗತ ಸಮಿತಿಯ ಕೋಶಾಧಿಕಾರಿ ಹಾಜಿ ಎಂ.ಎಚ್. ಮುಹಿಯುದ್ದೀನ್ ಅಡ್ಡೂರು ಸಮಸ್ತ ಮಹಾ ಸಮ್ಮೇಳನಕ್ಕೆ ದಾನವಾಗಿ 2 ಲ.ರೂ, ನೀಡಿ ಫಂಡ್ ಉದ್ಘಾಟಿಸಿದರು. ಸಮಸ್ತ ಕರ್ನಾಟಕ ಮುಶಾವರ ಕಾರ್ಯಾಧ್ಯಕ್ಷ ಕೆ.ಎಂ. ಉಸ್ಮಾನುಲ್ ಫೈಝಿ ತೋಡಾರು ಸ್ವಾಗತಿಸಿದರು. ಕಚೇರಿ ಕಾರ್ಯದರ್ಶಿ ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ವಂದಿಸಿದರು.







