ಮಂಗಳೂರು: ರೋಶನಿ ನಿಲಯದ ಎಂ.ಎಸ್.ಡಬ್ಲ್ಯು. 1999ನೇ ಬ್ಯಾಚ್ ನ 'ಸ್ನೇಹ ಸಮ್ಮಿಲನ'

ಮಂಗಳೂರು, ಜ.3: ರೋಶನಿ ನಿಲಯದ ಎಂ.ಎಸ್.ಡಬ್ಲ್ಯು. 1999ನೇ ಸಾಲಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನವು ಡಿ.30ರಂದು ರೋಶನಿ ನಿಲಯದಲ್ಲಿ ನಡೆಯಿತು.
ಈ ವೇಳೆ ತಮ್ಮ ಪ್ರಾಧ್ಯಾಪಕರಾದ ಪ್ರೊ.ಕೆ.ಎ.ಸೆಲ್ವರಾಜ್, ಡಾ.ಜಿ.ಆರ್.ಕೃಷ್ಣಮೂರ್ತಿ, ಪ್ರೊ.ಹಿಲ್ಡಾ ರಾಯಪ್ಪನ್, ಡಾ. ರೀಟಾ ನೊರೊನ್ಹಾ, ಡಾ.ರಮೀಳಾ ಶೇಖರ್, ಮಾಜಿ ಪ್ರಾಂಶುಪಾಲರಾದ ಫಿಲೋಮಿನಾ ಸೆರಾವೊ ಮತ್ತು ಡಾ. ಜೆಸಿಂತಾ, ಹಾಲಿ ಪ್ರಾಂಶುಪಾಲ ಡಾ. ಸೋಫಿಯಾ ಫೆರ್ನಾಂಡಿಸ್ ಹಾಗೂ ಮಾಜಿ ದೈಹಿಕ ಶಿಕ್ಷಣ ಶಿಕ್ಷಕಿ ಡಾ. ಫ್ಲೋಸಿ ರಾಯಪ್ಪನ್ ಅವರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಸುಮಾರು 25 ವರ್ಷದ ಬಳಿಕ ನಡೆದ ಸ್ನೇಹ ಸಮ್ಮಿಲನದಲ್ಲಿ ಪಾಲ್ಗೊಂಡ ಡಾ.ಲಕ್ಷ್ಮಿ, ವಿಜಯ್ ಮಂಜೇಶ್ವರ್, ಕೆನೆತ್, ಡಾ.ಉಮರ್ ಬೀಜದಕಟ್ಟೆ ಮತ್ತು ಲ್ಯಾನ್ಸಿ ತಮ್ಮ 25 ವರ್ಷಗಳ ಜೀವನ ಅನುಭವಗಳನ್ನು ಹಂಚಿಕೊಂಡರು. ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿಗಳ ಯಶಸ್ಸಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಆ ಕಾಲಾಂತರದಲ್ಲಿ ನಡೆದ ವಿಷಯಗಳನ್ನು ಮೆಲುಕು ಹಾಕಿದರು.
ಅಗಲಿದ ಪ್ರೊ. ಮಾಧವ ಶೆಣೈ ಹಾಗೂ ಸಹಪಾಠಿಗಳಾದ ರಜನಿ ಮತ್ತು ಮಾಧುರಿ ಗುರುರಾಜ್ ಅವರನ್ನು ಸ್ಮರಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಇತರ ಹಳೆ ವಿದ್ಯಾರ್ಥಿಗಳಾದ ಅನುಪ್, ಗಿರೀಶ್ ಲೋಬೋ, ಸಂತೋಷಿ, ಹರೀಶ್ ಶೆಟ್ಟಿ, ವಾಸು, ಸದಾಶಿವ, ರೋಹನ್, ಪುಟ್ಟಣ್ಣ ಹಾಗೂ ಜಯಪ್ರಕಾಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುಜಾಹ್ ಮುಹಮ್ಮದ್ ಸ್ವಾಗತಿಸಿದರು. ಇಂದಿರಾ ವಂದಿಸಿದರು. ವನಿತಾ ಚೂಂತಾರು ಕಾರ್ಯಕ್ರಮ ನಿರೂಪಿಸಿದರು.
ಸ್ನೇಹ ಸಮ್ಮಿಲನದ ಪ್ರಯುಕ್ತ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಒಳರೋಗಿ ಸಹವರ್ತಿಗಳಿಗೆ ಊಟ ನೀಡುವ 'ಕಾರುಣ್ಯ ಯೋಜನೆ'ಗೆ ಡಿ.29ರ ಪ್ರಾಯೋಜಕತ್ವವನ್ನು ಹಳೆ ವಿದ್ಯಾರ್ಥಿಗಳು ನೀಡಿದರು.
ಎಂ. ಫ್ರೆಂಡ್ಸ್ ಉಪಾಧ್ಯಕ್ಷ ಸುಜಾಹ್ ಮುಹಮ್ಮದ್ ಕೂಡಾ ಈ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದು, ಅವರೊಂದಿಗೆ ಅನೂಪ್, ಸಂತೋಷಿ, ಪುಟ್ಟಣ್ಣ, ಇಂದಿರಾ ಮತ್ತು ವನಿತಾ ಭಾಗವಹಿಸಿ ಎಂ. ಫ್ರೆಂಡ್ಸ್ ಸೇವೆಯನ್ನು ಶ್ಲಾಘಿಸಿದರು.







