ಪಂಪ್ವೆಲ್ | ತಕ್ವಾ ಜುಮಾ ಮಸೀದಿಯಲ್ಲಿ ನಡೆದ ಮೌಲಿದ್ ಮಜ್ಲಿಸ್

ಮಂಗಳೂರು : ಮಂಗಳೂರಿನ ಪಂಪ್ವೆಲ್‌ನಲ್ಲಿರುವ ತಕ್ವಾ ಜುಮಾ ಮಸೀದಿಯಲ್ಲಿ ಶುಕ್ರವಾರ ಮೌಲಿದ್ ಮಜ್ಲಿಸ್ ನಡೆಯಿತು.
ಅಸರ್ ನಮಾಝ್‌ನ ಬಳಿಕ ಖ್ಯಾತ ವಾಗ್ಮಿ ನೌಫಲ್ ಕಳಸ ಉಸ್ತಾದ್ ಅವರು, ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ಅವರ ಕೆಲವೊಂದು ಆದರ್ಶಗಳನ್ನು ಅರ್ಥಪೂರ್ಣವಾದ ರೀತಿಯಲ್ಲಿ ಉಪನ್ಯಾಸ ನೀಡಿದರು.
ಮಗ್ರಿಬ್ ನಮಾಝ್ ನಂತರ ನಡೆದ ಆಧ್ಯಾತ್ಮಿಕ ಮೌಲಿದ್ ಮಜ್ಲಿಸ್ ನೇತೃತ್ವವನ್ನು ಸಯ್ಯಿದ್ ಸಹೀರ್ ತಂಙಳ್ ಪೋಸೊಟು ವಹಿಸಿದ್ದರು.
ತಕ್ವಾ ಜುಮಾ ಮಸೀದಿಯ ಖತೀಬ್ ಅವರ ಜೊತೆ ತಕ್ವಾ ಜುಮಾ ಮಸೀದಿಯ ಮುಹಝೀನ್ ಉಸ್ತಾದ್ ಅವರು ಮೌಲಿದ್ ಮಜ್ಲಿಸ್ ನಡೆಸಿಕೊಟ್ಟರು.
ತಕ್ವಾ ಜುಮಾ ಮಸೀದಿಯ ಅಧ್ಯಕ್ಷರಾದ ಯನೋಪೊಯ ಅಬ್ದುಲ್ಲಾ ಕುಂಞಿ, ಟ್ರಸ್ಟಿ ಹಾಗೂ ಕೋಶಾಧಿಕಾರಿ ರಶೀದ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಉಸ್ತಾದ್, ಪಿಸಿ ಹಾಸಿರ್, ಟ್ರಸ್ಟಿಗಳಾದ ಶಾಕಿರ್ ಹಾಜಿ ಹೈಸಂ, ಹೈದರ್ ಹಾಜಿ ಪರ್ತಿಪಾಡಿ, ಬಿ.ಎಂ.ಬಶೀರ್ ಅಹ್ಮದ್ ಹಾಜಿ, ಜಲೀಲ್, ನಝೀರ್ ಈದ್ಗಾ, ರಹ್ಮಾನಿಯ, ಖತೀಜ ಮಸೀದಿಗಳ ಖತೀಬರುಗಳು ಹಾಗೂ ಸಾವಿರಾರು ಜನಸೇರಿದ್ದರು.





