'ಮಂಗಳೂರು ದಸರಾ' ಶೋಭಾಯಾತ್ರೆಗೆ ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಚಾಲನೆ

ಮಂಗಳೂರು, ಅ.2: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೆ.22ರಂದು ಆರಂಭಗೊಂಡ ನವರಾತ್ರಿಯ ಹಬ್ಬದ ಮಂಗಳೂರು ದಸರಾ ಮೆರವಣಿಗೆಗೆ ಗುರುವಾರ ಸಂಜೆ ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಚಾಲನೆ ದೊರೆಯಿತು.
ಗಣಪತಿ, ನವದುರ್ಗೆಯರು, ಮತ್ತು ಶಾರದಾ ಮಾತೆಯ ಶೋಭಾಯಾತ್ರೆ ಕ್ಷೇತ್ರದಿಂದ ಆರಂಭಗೊಂಡಿದೆ. ವಿವಿಧ ಸಂಘಟನೆಗಳ ಟ್ಯಾಬ್ಲೊಗಳೊಂದಿಗೆ ಶುಕ್ರವಾರ ಮುಂಜಾನೆಯ ವರೆಗೆ ನಡೆಯುವ ಶೋಭಾಯಾತ್ರೆ ನಗರ ಪ್ರದಕ್ಷಿಣೆಯೊಂದಿಗೆ ಶ್ರೀಕ್ಷೇತ್ರಕ್ಕೆ ಮರಳಲಿದ್ದು, ವಿಸರ್ಜನೆಯೊಂದಿಗೆ ಸಮಾಪನಗೊಳ್ಳಲಿದೆ.
ಕುದ್ರೋಳಿ ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಐವನ್ ಡಿಸೋಜ, ಶ್ರೀ ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಜೈರಾಜ್ ಸೋಮ ಸುಂದರ್ , ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಕೋಶಾಧಿಕಾರಿ ಆರ್ ಪದ್ಮರಾಜ್ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಸದಸ್ಯರಾದ ಜಗದೀಪ್ ಸುವರ್ಣ, ಕೃತಿನ್ ಅಮಿನ್, ರಾಧಾಕೃಷ್ಣ, ಹರಿಕೃಷ್ಣ ಬಂಟ್ವಾಳ, ಜಗದೀಪ್ ಸುವರ್ಣ, ಕೃತಿನ್ ಅಮೀನ್, ಶೈಲೇಂದ್ರ ಸುವರ್ಣ, ಹರೀಶ್ ಸುವರ್ಣ, ಲತೇಶ್ ಕೋಟ್ಯಾನ್, ಲೀಲಾಕ್ಷ ಕರ್ಕೆರ ಮತ್ತಿತರರು ಉಪಸ್ಥಿತರಿದ್ದರು







