ಮಂಗಳೂರು, ಉಡುಪಿ ಫೋಟೊಗ್ರಾಫರ್ ಅಸೋಸಿಯೇಶನ್ ವತಿಯಿಂದ ರಾಜೇಂದ್ರ ಕುಮಾರ್, ಉದ್ಯಮಿ ಪ್ರಕಾಶ್ ರೈಗೆ ಸನ್ಮಾನ

ಮಂಗಳೂರು, ಅ.4; ಫೊಟೋಗ್ರಾಫರ್ಸ್ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಾ ಬಂದವರು ಎಂದು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಅವರು ಶನಿವಾರ ನಗರದ ಸುಲ್ತಾನ್ ಬತ್ತೇರಿ ಸಭಾಂಗಣದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರ ಸಂಘ ನಿ.ಮಂಗಳೂರು-ಉಡುಪಿ ಇದರ ದಶಮಾನೋತ್ಸವ ಸಮಾರಂಭದಲ್ಲಿ ಕುಟುಂಬ ಸಮ್ಮಿಲನ, ಪ್ರತಿಭಾ ಪುರಸ್ಕಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮತ್ತು ಪ್ರಕಾಶ್ ಶೆಟ್ಟಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿರಂತರ ಕೊಡುಗೆ ನೀಡುತ್ತಾ ಬಂದವರು ಎಂದು ಅವರನ್ನು ಅಭಿನಂದಿ ಸಿದರು.ಫೊಟೋಗ್ರಾಫರ್ಸ್ ಸಮಾಜದಲ್ಲಿ ಅವಿಸ್ಮರಣೀಯ ಕ್ಷಣಗಳನ್ನು ದಾಖಲಿಸುತ್ತಾ ಜನಸಾಮಾನ್ಯರಿಗೆ ಸಂತೋಷ್ ವನ್ನುಂಟು ಮಾಡುವ ಸಾಮರ್ಥ್ಯ ಹೊಂದಿದವರು ಎಂದು ಶುಭ ಹಾರೈಸಿದರು.
ಡಾ.ಭರತ್ ಶೆಟ್ಟಿ,ಸುರೇಶ್ ಶೆಟ್ಟಿ ಗುರ್ಮೆ ಶುಭ ಹಾರೈಸಿದರು. ಸಮಾರಂಭದಲ್ಲಿ ಫೋಟೋಗ್ರಾಫರ್ ಅಸೋಸಿಯೇಶನ್ ಉಪಾಧ್ಯಕ್ಷ ಹರೀಶ್,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ,ಉಡುಪಿ ಫೊಟೋಗ್ರಾಫರ್ಸ್ ಎಸೋಸಿ ಯೇಶನ್ ಅಧ್ಯಕ್ಷ ಪದ್ಮ ಪ್ರಸಾದ್ ಜೈನ್ , ಸುರೇಶ್ ಶೆಟ್ಟಿ,ಜಗದೀಶ್ ಜೈನ್,ಹರೀಶ್ ಅಡ್ಯಾರ್, ಲೋಕೇಶ್ ,ಭರತ್ ಕುಮಾರ್, ಜಯಪ್ರಕಾಶ್ ರಾವ್,ಸಂತೋಷ್ ಶೆಟ್ಟಿ, ದಯಾನಂದ ಬಂಟ್ವಾಳ್, ಆನಂದ, ವಿಠಲ ಚೌಟ, ಯಶವಂತ ಮೆಂಡನ್ ,ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪಮ್ಮಿಕೊಡಿಯಾಲ ಬೈಲ್,ಉದ್ಯಮಿ ಹರಿಪ್ರಸಾದ್ ಜೆ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು. ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರ ಸಂಘ ನಿ.ಮಂಗಳೂರು-ಉಡುಪಿ ಇದರ ಅಧ್ಯಕ್ಷ ವಾಸುದೇವರಾವ್ ಸ್ವಾಗತಿಸಿದರು.
*ಸಮಾರಂಭದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರ ಸಂಘ ನಿ.ಮಂಗಳೂರು-ಉಡುಪಿ ಇದರ ವತಿಯಿಂದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹಾಗೂ ಎಂಆರ್ ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ ಯವರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ನಡೆಯಿತು.







