ಪಿಲಿಚಂಡಿಕಲ್ಲು: ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ಗುರುವಾಯನಕೆರೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಲಿಚಂಡಿ ಕಲ್ಲು (ಗುರವಾಯನಕೆರೆ) ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.
ಹೊಸದಾಗಿ ದಾಖಲಾದ ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಲಂದರ್ ಬಿ ಹೆಚ್ ವಹಿಸಿದ್ದರು, ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ನಮ್ಮ ಶಾಲಾ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ಹಕೀಮ್ ಇವರ ಪುತ್ರ, ಹಳೆ ವಿದ್ಯಾರ್ಥಿ ಮಹಮ್ಮದ್ ಸಹಝದ್ SSLC ಪರೀಕ್ಷೆಯಲ್ಲಿ 616 ಅಂಕಗಳಿಸಿದ ಕಾರಣ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಮೋಹನ್, ಶಾಲಾ ಸ್ಥಾಪಕ ಅಧ್ಯಕ್ಷ ಆಲಿಯಬ್ಬ, ಉಪಾಧ್ಯಕ್ಷ ಲಲಿತಾ, ಶಾಲಾ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಹಕೀಮ್, ಮುಸ್ತಫಾ ಕೆ, sdmc ಸದಸ್ಯರಾದ ಸಿರಾಜುದ್ದೀನ್, ಉಸ್ಮಾನ್, ಅಶ್ರಫ್, ರಫೀಕ್, ಸದಸ್ಯರು, ಪೋಷಕರು, ಶಿಕ್ಷಕರು, ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರು ಸ್ವಾಗತಿಸಿದರು, ಪೆಲ್ಸಿರೊಡ್ರಿಗಸ್ ಸೇತುಬಂಧ ಬಗ್ಗೆ ಮಾಹಿತಿ ನೀಡಿದರು. ಸಹ ಶಿಕ್ಷಕರಾದ ಮತಿ ಲಕ್ಷ್ಮೀ ಆಚಾರ್ತಿ ನಿರೂಪಿಸಿದರು. ಪ್ರಮೀಳ ವಂದಿಸಿದರು.






