ಉಪ್ಪಿನಂಗಡಿ: ಸೌತ್ ಕೊರಿಯಾದಲ್ಲಿ ನಡೆಯಲಿರುವ 25 ನೇ ವಿಶ್ವ ಜಾಂಬೂರಿಗೆ ವೈಭವ್ ಪ್ರಭು ಆಯ್ಕೆ

ಉಪ್ಪಿನಂಗಡಿ: ದಕ್ಷಿಣ ಕೋರಿಯಾದಲ್ಲಿ ಆ.1ರಿಂದ 12ರವರೆಗೆ ನಡೆಯಲಿರುವ 25ನೇ ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿಯ ಸೀನಿಯರ್ ರಾಜ್ಯ ಪುರಸ್ಕೃತ ಸ್ಕೌಟ್ ವೈಭವ್ ಪ್ರಭು ಆಯ್ಕೆ ಆಗಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಇವರು ಪ್ರಸ್ತುತ ಸಂತ ಅಲೋಶಿಯಸ್ ಪದವಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಉಪ್ಪಿನಂಗಡಿಯ ಶ್ರೀ ರವೀಂದ್ರ ಪ್ರಭು ಮತ್ತು ಶ್ರೀಮತಿ ರಕ್ಷಿತಾ ಪ್ರಭು ದಂಪತಿಯ ಪುತ್ರ.
Next Story