ಎಸೆಸೆಲ್ಸಿ ಪರೀಕ್ಷೆ: ಮಂಗಳೂರಿನ ಬೀದಿಬದಿ ವ್ಯಾಪಾರಿಯ ಪುತ್ರಿ ರಕ್ಷಾಳಿಗೆ 603 ಅಂಕ

ಮಂಗಳೂರು, ಎ.23: ಎಸೆಸ್ಸಲ್ಸಿ ಪರೀಕ್ಷೆಯಲ್ಲಿ ಮಂಗಳೂರಿನ ಬೀದಿಬದಿ ವ್ಯಾಪಾರಿಯೊಬ್ಬರ ಪುತ್ರಿ ಕೆ. ರಕ್ಷಾ ಜಿ.ಎನ್.603 ಅಂಕ ಗಳಿಸಿ ಶೇ.96.48 ಫಲಿತಾಂಶ ದಾಖಲಿಸಿ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ನಗರದ ಕಂಕನಾಡಿ ಗ್ರಾಮದ ಕಪಿತಾನಿಯೋ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾಗಿರುವ ರಕ್ಷಾ ಹಿಂದಿ ಮತ್ತು ಕನ್ನಡ ವಿಷಯದಲ್ಲಿ 100 ಅಂಕ ಗಳಿಸಿದ್ದಾರೆ.
ನಗರದ ಪಂಪ್‌ವೆಲ್ ಬಳಿಯ ಬೀದಿಬದಿಯಲ್ಲಿ ವ್ಯಾಪಾರಿಯಾಗಿರುವ ನಾಗೇಶ್ ಮತ್ತು ಗಾಯತ್ರಿಯ ಪುತ್ರಿ ರಕ್ಷಾ ಅವರ ಸಾಧನೆಗೆ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಅಭಿನಂದನೆ ಸಲ್ಲಿಸಿದೆ.
Next Story




