ಮಂಗಳೂರು: ‘ಏಸ್’ ಐಎಎಸ್ ಅಕಾಡೆಮಿಯ ವಿದ್ಯಾರ್ಥಿ ಅಬೂಸಾಲಿಯ ಖಾನ್ UPSC ಪರೀಕ್ಷೆಯಲ್ಲಿ ತೇರ್ಗಡೆ

ಅಬೂಸಾಲಿಯ ಖಾನ್
ಮಂಗಳೂರು: ನಗರದ ‘ಏಸ್’ ಐಎಎಸ್ ಅಕಾಡೆಮಿಯ ವಿದ್ಯಾರ್ಥಿ ಅಬೂಸಾಲಿಯ ಖಾನ್ UPSC ಪರೀಕ್ಷೆಯಲ್ಲಿ 588 ರ್ಯಾಂಕ್ ನೊಂದಿಗೆ 2024ರ ನಾಗರಿಕ ಸೇವಾ ಪರೀಕ್ಷೆ (UPSC)ಯಲ್ಲಿ ಆಯ್ಕೆಯಾಗಿದ್ದಾರೆ.
ರಾಣಿಬೆನ್ನೂರು ನಿವಾಸಿ, ಬಸ್ ಕಂಡಕ್ಟರ್ ಆಗಿದ್ದ ದಿ. ಹುಸೇನ್ ಖಾನ್ ಮತ್ತು ಅರ್ಷಾದ್ ಬಾನು ಅವರ ಪುತ್ರ ಅಬೂಸಾಲಿಯ ಖಾನ್ ಅವರು ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು BSc Agriculture ಪದವೀಧರರಾಗಿದ್ದಾರೆ.
ಇದು ಅಬೂಸಾಲಿಯ ಖಾನ್ ಅವರ 3ನೇ ಪ್ರಯತ್ನವಾಗಿದೆ. ಈಗ UPSCಯಲ್ಲಿ ಗಳಿಸಿರುವ ರ್ಯಾಂಕ್ ಪ್ರಕಾರ IPS ಅಥವಾ IRS ಹುದ್ದೆ ದೊರೆಯುವ ಸಾಧ್ಯತೆ ಇದೆ. ಇದಲ್ಲದೇ ಅವರು ಭಾರತೀಯ ಅರಣ್ಯ ಸೇವೆಯ (IFoS) ಸಂದರ್ಶನಕ್ಕೆ ಆಯ್ಕೆಗೊಂಡು ಸಂದರ್ಶನವನ್ನು ನೀಡಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





