ಜೂ.7ರಿಂದ ದಕ್ಷಿಣ ಏಷ್ಯಾ ರೋಟ್ರಾಕ್ಟ್ ಅಂತರ್ ಜಿಲ್ಲಾ ಪ್ರತಿನಿಧಿಗಳ ಸಮಾವೇಶ

ಮಂಗಳೂರು: ದಕ್ಷಿಣ ಏಷ್ಯಾದ ರೋಟಾರೆಕ್ಟ್ ಚಟುವಟಿಕೆಗಳ ಕೇಂದ್ರ RSAMDIO ( ರೋಟಾರೆಕ್ಟ್ ಸೌತ್ ಏಷಿಯಾ ಮಲ್ಟಿ-ಡಿಸ್ಟ್ರಿಕ್ಟ್ ಇನ್‌ಫಾ ರ್ಮೇಶನ್ ಆರ್ಗನೈಸೇಷನ)2025–26ನೇ ಸಾಲಿನ ಪದಗ್ರಹಣ ಸಮಾರಂಭ ಪ್ರಶಸ್ತಿ ಪ್ರಧಾನ ಸಮಾರಂಭ ಮಂಗಳೂರಿನ ಆವತಾರ್ ಹೋಟೆಲ್‌ನಲ್ಲಿ ಜೂನ್ 7 ಮತ್ತು 8 ರಂದು ಸಂಜೆ 3:30 ಗಂಟೆಯಿಂದ ಆರಂಭವಾಗಿದೆ.
ಈ ಸಮಾರಂಭ ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ನಡೆಯುತ್ತಿದೆ ಎಂದು ಪಿಡಿಜಿ ಎಂಡಿ ಡಾ. ಬಿ. ದೇವದಾಸ್ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಸಮಾವೇಶದಲ್ಲಿ 3 ದೇಶಗಳು ಮತ್ತು 23 ರಾಜ್ಯಗಳಿಂದ 250 ಕ್ಕೂ ಹೆಚ್ಚು ರೋಟಾರೆಕ್ಟ್ ಪ್ರತಿನಿಧಿ ಗಳು ಭಾಗವಹಿಸಲಿರುವ ಈ 2 ದಿನಗಳ ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ರೋಟರಿ ಇಂಟರ್ ನ್ಯಾಷನಲ್ ಡೈರೆಕ್ಟರ್ ಅನಿರುದ್ಧ ರಾಯ್ ಚೌಧುರಿ ಅವರು ಭಾಗವಹಿಸಿ ಪ್ರಧಾನ ಭಾಷಣ ನೀಡಲಿದ್ದಾರೆ. ಗೌರವಾನ್ವಿತ ಅತಿಥಿಯಾಗಿ RI ಜಿಲ್ಲೆ 3181 ರ ಜಿಲ್ಲಾ ಗವರ್ನರ್ ವಿಕ್ರಮದತ್ತ ಅವರು ಭಾಗವಹಿಸಲಿ ದ್ದಾರೆ ಎಂದವರು ತಿಳಿಸಿದ್ದಾರೆ.
ರೋಟಾರೆಕ್ಟ್ ಸೌತ್ ಏಷಿಯಾ ಮಲ್ಟಿ-ಡಿಸ್ಟ್ರಿಕ್ಟ್ ಇನ್‌ಫಾ ರ್ಮೇಶನ್ ಆರ್ಗನೈಸೇಷನ ಅಧ್ಯಕ್ಷರಾಗಿ ಕರ್ನಾಟಕದಿಂದ ಆಯ್ಕೆ ಆದವರಲ್ಲಿ ಡೇರಲ್ ಎರಡನೆ ಯವರು ಹಾಗೂ ಅವರು ಈ ಸಂಸ್ಥೆಯ 16ನೇ ಅಧ್ಯಕ್ಷರಾಗಲಿದ್ದಾರೆ. ಕಾರ್ಯಕ್ರಮವು ನಾಯಕತ್ವ, ಸಂಸ್ಕೃತಿ ಮತ್ತು ಸೇವೆಯ ಮಹತ್ವದ ಉತ್ಸವವಾ ಗಲಿದೆ ಎಂದವರು ತಿಳಿಸಿದ್ದಾರೆ.
ಸುದ್ದಿ ಗೋಷ್ಠಿ ಯಲ್ಲಿ ರೋಟರಾಕ್ಟ್ ದಕ್ಷಿಣ ಏಷ್ಯಾ ಎಂಡಿಐಒದ ಚುನಾಯಿತ ಅಧ್ಯಕ್ಷ ಡ್ಯಾರಿಲ್ ಸ್ಟೀವನ್ ಡಿಸೋಜಾ, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್‌ನ ಚುನಾಯಿತ ಅಧ್ಯಕ್ಷ ಭಾಸ್ಕರ ರೈ, ಎಂ.ವಿ. ಮಲ್ಯ, ಗೌರವಾ ನ್ವಿತ ಭಾಸ್ಕರ್ ರೈ ಮೊದಲಾದವರು ಉಪಸ್ಥಿತರಿದ್ದರು.







