ಖ್ಯಾತ ವಿದ್ವಾಂಸ ಅಬೂಬಕರ್ ಸಖಾಫಿ ಅಗತ್ತಿ ಉಸ್ತಾದ್ ನಿಧನ

ಮಂಗಳೂರು: ಖ್ಯಾತ ವಿದ್ವಾಂಸ, ಮಅದಿನ್ ಸಂಸ್ಥೆಯ ಪ್ರಾಚಾರ್ಯರಾದ ಅಬೂಬಕರ್ ಸಖಾಫಿ ಅಗತ್ತಿ (53) ಶನಿವಾರ ನಿಧನರಾಗಿದ್ದಾರೆ.
ಲಕ್ಷದ್ವೀಪ ದ್ವೀಪ ಸಮೂಹದ ಅಗತ್ತಿ ಮೂಲದವರಾದ ಅಬೂಬಕರ್ ಸಖಾಫಿ ಆಗತ್ತಿ ಉಸ್ತಾದ್ ಗಣಿತ, ಖಗೋಳ ವಿಜ್ಞಾನ ಹಾಗೂ ಇಸ್ಲಾಮಿಕ್ ಜ್ಞಾನ ಶಿಸ್ತುಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು.
ದಕ್ಷಿಣ ಭಾರತೀಯ ಇತಿಹಾಸ ಹಾಗೂ ಹಿಂದೂ ಮಹಾಸಾಗರ ಅಧ್ಯಯನ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ ಹಲವಾರು ಸಂಶೋಧಕರ ಆಗರ ಎನಿಸಿಕೊಂಡಿದ್ದರು. ಅಲ್ಲದೇ ನೂರರಷ್ಟು ಅರೇಬಿಕ್ ಗ್ರಂಥಗಳನ್ನು ರಚಿಸಿರುವ ಇವರು ಇಸ್ಲಾಮಿಕ್ ಕ್ಯಾಲೆಂಡರ್ ನಿರ್ಮಾಣದಲ್ಲಿ ಚತುರರಾಗಿದ್ದರು.
ಅವರು ಪತ್ನಿ, ಮಕ್ಕಳು ಹಾಗೂ ಸಾವಿರಾರು ಕನ್ನಡಿಗರೂ ಒಳಗೊಂಡಿರುವ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ.
ಆಗತ್ತಿ ಉಸ್ತಾದ್ ನಿಧನಕ್ಕೆ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್, ಸಯ್ಯಿದ್ ಖಲೀಲುಲ್ ಬುಖಾರಿ, ಮಾಣಿ ಉಸ್ತಾದ್ ಸಹಿತ ಹಲವು ವಿದ್ವಾಂಸರು ಸಂತಾಪ ಸೂಚಿಸಿದ್ದಾರೆ.
Next Story





