Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ತಲಪಾಡಿಯಲ್ಲಿ ಅಪಘಾತ ಪ್ರಕರಣ| ಬಸ್...

ತಲಪಾಡಿಯಲ್ಲಿ ಅಪಘಾತ ಪ್ರಕರಣ| ಬಸ್ ಬ್ರೇಕ್ ಫೇಲ್ ಸಂಭವಿಸಿಲ್ಲ: ಕೆಎಸ್ಸಾರ್ಟಿಸಿ ಸ್ಪಷ್ಟನೆ

ವಾರ್ತಾಭಾರತಿವಾರ್ತಾಭಾರತಿ29 Aug 2025 7:40 PM IST
share
ತಲಪಾಡಿಯಲ್ಲಿ ಅಪಘಾತ ಪ್ರಕರಣ| ಬಸ್ ಬ್ರೇಕ್ ಫೇಲ್ ಸಂಭವಿಸಿಲ್ಲ: ಕೆಎಸ್ಸಾರ್ಟಿಸಿ ಸ್ಪಷ್ಟನೆ
► ಮೃತ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರ ►ಗಾಯಾಳುಗಳ ಚಿಕಿತ್ಸಾ ವೆಚ್ಚ ಪಾವತಿಗೆ ಕ್ರಮ

ಉಳ್ಳಾಲ: ಮಂಜೇಶ್ವರ ಠಾಣಾ ವ್ಯಾಪ್ತಿಯ ತಲಪಾಡಿ ಟೋಲ್ ಗೇಟ್ ಬಳಿ ಗುರುವಾರ ಮಧ್ಯಾಹ್ನ ಕೆಎಸ್ಸಾರ್ಟಿಸಿ ಬಸ್ ಹಾಗೂ ಆಟೋರಿಕ್ಷಾ ನಡುವೆ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಮೃತಪಟ್ಟ ಒಂದೇ ಕುಟುಂಬದ ಐವರ ಸಹಿತ ಒಟ್ಟು ಆರು ಮಂದಿಯ ಮೃತ ದೇಹ ದಫನ ಕಾರ್ಯ ಗುರುವಾರ ಮಧ್ಯರಾತ್ರಿ ವೇಳೆ ನಡೆಯಿತು.

ಡಿಪೋದ ವತಿಯಿಂದ ಸ್ಪೀಕರ್ ಯುಟಿ ಖಾದರ್ ಸೂಚನೆ ಮೇರೆಗೆ ತಲಾ ಒಂದು ಲಕ್ಷ ದಂತೆ ಪರಿಹಾರ ಒದಗಿಸಲಾಯಿತು.

ಅಟೋ ಚಾಲಕ ಹೈದರ್ ಅವರ ಮೃತ ದೇಹವನ್ನು ಕಿನ್ಯ ಮೀನಾದಿ ಹಾಗೂ ಮೃತ ನಫೀಸ ಅವರ ಅತ್ತೆಯ ಮೃತದೇಹ ಫರಂಗಿಪೇಟೆ ಮಸೀದಿ ಬಳಿ ದಪನ ಕಾರ್ಯ ನಡೆಯಿತು.

ಅಜ್ಜಿನಡ್ಕ ನಿವಾಸಿ ಖದೀಜ(60),ಸೋದರಿ ನಫೀಸ (52),ನಫೀಸರವರ ಪುತ್ರಿ ಆಯಿಷಾ ಪಿದಾ (19), ನಫೀಸ ರ ಸಹೋದರ ‌ ಶಾಹುಲ್ ಹಮೀದ್ ರ ಪುತ್ರಿ ಹಸ್ನ (11) ಅವರನ್ನು ಅಜ್ಜಿನಡ್ಕ ಮಸೀದಿಯಲ್ಲಿ ಮಯ್ಯತ್ ನಮಾಝ್ ನಿರ್ವಹಿಸಿದ ಬಳಿಕ ಕಲ್ಲಾಪು ಪಟ್ಲ ಬಳಿ ಇರುವ ದಫನ ಭೂಮಿಯಲ್ಲಿ ಧಪನ ಕಾರ್ಯ ನಿರ್ವಹಿಸಿದರು.

ಸ್ಪೀಕರ್ ಯುಟಿ ಖಾದರ್, ಮಂಜೇಶ್ವರ ಶಾಸಕ ಅಶ್ರಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ,ಹರ್ಷಾದ್ ವರ್ಕಾಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಂಗ್ರೆಸ್ ಮುಖಂಡ ಅಶ್ರಫ್, ಪದ್ಮರಾಜ್ ಪೂಜಾರಿ,ಕೋಟೆಕಾರ್ ಪ.ಪಂ ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ‌ಸಹಿತ ಅನೇಕ ಗಣ್ಯರು,ಕುಟುಂಬಸ್ಥರು, ಸ್ಥಳೀಯರು , ಸ್ನೇಹಿತರು ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದರು.

ಪರಿಹಾರ: ಕಾಸರಗೋಡು ಕಡೆಯಿಂದ ಬರುತ್ತಿದ್ದ ಕರ್ನಾಟಕದ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಕೆಎಸ್ಸಾರ್ಟಿಸಿ ಡಿಪೋ ವತಿಯಿಂದ ಸ್ಪೀಕರ್ ಯುಟಿ ಖಾದರ್ ಸೂಚನೆ ಮೇರೆಗೆ ತಲಾ ಒಂದು ಲಕ್ಷ ದಂತೆ ಒಟ್ಟು ಆರು ಲಕ್ಷ ಪರಿಹಾರವನ್ನು ಶುಕ್ರವಾರ ವಿತರಣೆ ಮಾಡಲಾಯಿತು.

ಕೆಎಸ್ಸಾರ್ಟಿಸಿ ಮಂಗಳೂರು ಡಿಪೋದ ಡಿಟಿಒ ಕಮಲ್ ಕುಮಾರ್, ಮೆನೇಜರ್ ಪ್ರಶಾಂತ್, ಸಹಾಯಕ ಸಂಚಾರ ನಿರೀಕ್ಷಕ ಅಫ್ಝಲ್ ಅತೀಕ್, ಕೋಟೆಕಾರ್ ಪ.ಪಂ. ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ ಉಪಸ್ಥಿತರಿದ್ದರು.

ನಿನ್ನೆ ನಡೆದ ಘಟನೆಯಲ್ಲಿ ಗಾಯಗೊಂಡಿರುವ ಕಾಸರಗೋಡು ನಿವಾಸಿ ಲಕ್ಷ್ಮೀ ಹಾಗೂ ಅವರ ಪುತ್ರ ಸುರೇಂದ್ರ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂದರ್ಭದಲ್ಲಿ ಸಂಬಂದಿಕರ ಮನೆಗೆ ಬಂದ ಅವರು ಊರಿಗೆ ಮರಳಲು ಬಸ್ ಗಾಗಿ ಕಾಯುತ್ತಿದ್ದರು.

ಸಹೋದರಿಯ ಮನೆಗೆ ತೆರಳಿದ್ದರು: ಸಹೋದರಿ ಗಳಾದ ಖದೀಜ ಹಾಗೂ ನಫೀಸ ರವರು ಕುಟುಂಬಸ್ಥರ ಜೊತೆ ಕುಂಜತ್ತೂರು ಬಳಿ ಇರುವ ಸಹೋದರಿ ಆಯಿಷ ಅವರ ಮನೆಗೆ ಗುರುವಾರ ಹೈದರ್ ರವರ ರಿಕ್ಷಾದಲ್ಲಿ ತೆರಳಿದಾಗ ಈ ದುರ್ಘಟನೆ ಸಂಭವಿಸಿತ್ತು.

ಎಂಟು ವರ್ಷಗಳ ಹಿಂದೆ ಕಾಸರಗೋಡು ವಿನಲ್ಲಿ ಮದುವೆ ಕಾರ್ಯ ಮುಗಿಸಿ ವಾಹನದಲ್ಲಿ ವಾಪಾಸು ಆಗುತ್ತಿದ್ದ ವೇಳೆ ಉಪ್ಪಳದಲ್ಲಿ ಸಂಭವಿಸಿದ ದುರಂತ ದಲ್ಲಿ ಇದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದರು.

ಉನ್ನತ ಮಟ್ಟದ ತನಿಖೆ ಆಗಬೇಕು

ಗುರುವಾರ ನಡೆಯಬಾರದ ಘಟನೆಯೊಂದು ಸರ್ಕಾರಿ ಬಸ್ ನಿಂಂದಾಗಿನಡೆದು ಹೋಗಿದೆ.‌ ಇದಕ್ಕೆ ಕಾರಣ ಏನು ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಚಾಲಕನ ತಪ್ಪು ಕಂಡು ಬಂದಲ್ಲಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ತಲಾ ಒಂದು ಲಕ್ಷ ದಂತೆ ಪರಿಹಾರ ನೀಡಲು ಕೆಎಸ್ಸಾರ್ಟಿಸಿ ಡಿಪೋ ಗೆ ಸೂಚನೆ ನೀಡಿದ್ದೇನೆ. ಕೋರ್ಟ್ ಅದಾಲತ್ ನಡೆದ ಬಳಿಕ ಸರ್ಕಾರದಿಂದ ಹೆಚ್ಚುವರಿ ಪರಿಹಾರ ಮೃತರ ಕುಟುಂಬಸ್ಥರಿಗೆ ನೀಡಲಾಗುವುದು.

ಚಾಲಕನ ನಿರ್ಲಕ್ಷ್ಯ ಧೋರಣೆ ಯಿಂದ ಘಟನೆ ನಡೆದಿದೆ ಎಂಬ ಆರೋಪ ಇದೆ. ಆದರೆ ಘಟನೆಯನ್ನು ನೋಡಿದವರು ಇಲ್ಲ. ಎಲ್ಲದಕ್ಕೂ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು.

-ಯು.ಟಿ. ಖಾದರ್, ಸ್ಪೀಕರ್

ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ

ಬಸ್‌ನಲ್ಲಿ ಸವೆದ ಟೈರ್‌ಗಳು ಅಥವಾ ತಾಂತ್ರಿಕ ದೋಷಗಳಿದ್ದರೆ ಅದು ಗಂಭೀರ ಅಪಾಯಕ್ಕೆ ಕಾರಣವಾಗ ಬಹುದು.ನಾವು ಖಾಸಗಿ ಬಸ್ ನೌಕರರ ಸಂಘದ ಪರವಾಗಿ ಪ್ರಯಾಣಿಕರ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ನೋಡುತ್ತೇವೆ. ವಾಹನ ಮಾಲೀಕರು ನಿರಂತರವಾಗಿ ಬಸ್‌ಗಳ ತಾಂತ್ರಿಕ ಸ್ಥಿತಿ ಪರಿಶೀಲಿಸಿ, ಟೈರ್, ಬ್ರೇಕ್ ಹಾಗೂ ಇತರ ಮುಖ್ಯ ಭಾಗಗಳನ್ನು ಸರಿಯಾಗಿ ನಿರ್ವಹಿಸುವುದು ಅಗತ್ಯ.

ಚಾಲಕರು ಮತ್ತು ನಿರ್ವಾಹಕರು ಯಾವುದೇ ತಾಂತ್ರಿಕ ಸಮಸ್ಯೆಯನ್ನು ತಕ್ಷಣ ಮಾಲೀಕರಿಗೆ ತಿಳಿಸಬೇಕು. ಈ ಘಟನೆ ನಮಗೆಲ್ಲರಿಗೂ ಎಚ್ಚರಿಕೆ. ಮುಂದಿನ ದಿನಗಳಲ್ಲಿ ಬಸ್‌ಗಳ ತಾಂತ್ರಿಕ ತಪಾಸಣೆಗೆ ಇನ್ನಷ್ಟು ಕಡ್ಡಾಯ ಕ್ರಮ ತೆಗೆದುಕೊಳ್ಳಲು, ಹಾಗೂ ಪ್ರಯಾಣಿಕರ ವಿಶ್ವಾಸವನ್ನು ಮರಳಿ ಗಳಿಸಲು ನಾವು ಬದ್ಧರಾಗಿದ್ದೇವೆ.

-ಉಸ್ಮಾನ್ ಅಲ್ತಾಫ್, ಅಧ್ಯಕ್ಷರು, ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ ಮಂಗಳೂರು

ಮಂಗಳೂರು-1ನೇ ಘಟಕದಿಂದ ಮಂಗಳೂರು-ಕಾಸರಗೋಡು ಮಾರ್ಗದ ಮೂಲಕ ಕಾರ್ಯಾಚರಣೆ ಮಾಡುತ್ತಿ ರುವ ಸಾಮಾನ್ಯ ಸಾರಿಗೆಗಳು ಸರ್ವಿಸ್ ರಸ್ತೆಯ ಮೂಲಕವೇ ಕಡ್ಡಾಯವಾಗಿ ನಮೂನೆ-4ರಂತೆ ಕಾರ್ಯಾಚರಣೆ ಮಾಡಬೇಕು. ಆದರೆ ಚಾಲನಾ ಸಿಬ್ಬಂದಿಗಳು ಆದೇಶಗಳನ್ನು ಉಲ್ಲಂಘಿಸಿ ಸಂಚಾರ ನಿಯಮಗಳನ್ನು ಪಾಲಿಸದೆ ಕಾರ್ಯಾಚರಿಸುತ್ತಿರುವ ಬಗೆ ದೂರುಗಳು ಬಂದಿವೆ.

ಮಂಗಳೂರು-ಕಾಸರಗೋಡು ವಲಯದಲ್ಲಿ ಹೆಚ್ಚು ಜನಸಂದಣಿ ಸ್ಥಳಗಳಲ್ಲಿ ಹಾಗೂ ಅಪಘಾತ ವಲಯಗಳಲ್ಲಿ ಹೆಚ್ಚಿನ ಜಾಗ್ರತೆಯಿಂದ ವಾಹನಗಳನ್ನು ಮಿತವೇಗದಲ್ಲಿ ಚಾಲನೆ ಮಾಡುವಂತೆ ಹಾಗೂ ಪ್ರಯಾಣಿಕರ ಬಾಗಿಲು ಗಳನ್ನು ಮುಚ್ಚಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ.

ಸದರಿ ಆದೇಶಗಳ ಕುರಿತು ಸೂಕ್ತ ತಿಳುವಳಿಕೆ ಮತ್ತು ಪಾಲನೆ ಮಾಡುವುದನ್ನು ಘಟಕ ವ್ಯವಸ್ಥಾಪಕರು ಮತ್ತು ಸಂಚಾರ ಮೇಲ್ವಿಚಾರಕರುಗಳು ಖಾತ್ರಿ ಪಡಿಸಿಕೊಳ್ಳಬೇಕು.

ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಕಾರಾಚರಣೆಯಾಗುವ ವಾಹನಗಳು ಸರ್ವೀಸ್ ರಸ್ತೆಯ ಮೂಲಕವೇ ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ಪರಿಶೀಲಿಸಲು ಅಧಿಕಾರಿ/ಸಿಬ್ಬಂದಿಗಳ ತಂಡಗಳನ್ನು ರಚಿಸಲಾಗಿದೆ.ಈ ನಿಯಮಗಳನ್ನು ಉಲ್ಲಂಘಿಸಿದ ಚಾಲನಾ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

-ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ. ಕರಾರಸಾ.ನಿಗಮ,ಮಂಗಳೂರು ವಿಭಾಗ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X