ಆದಿದ್ರಾವಿಡ ಸಮಾಜ ಸೇವಾ ಸಂಘದ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾಗಿ ಸಂತೋಷ್ ಆಯ್ಕೆ

ಬಂಟ್ವಾಳ, ಜು.24: ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಬಂಟ್ವಾಳ ತಾಲೂಕು ಸಮಿತಿಯ ನೂತನ ಅಧ್ಯಕ್ಷರಾಗಿ ಸಂತೋಷ್ ಆಯ್ಕೆಯಾಗಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಧರ್ಣಪ್ಪ ಬಡಗಬೆಳ್ಳೂರು, ಉಪಾಧ್ಯಕ್ಷರಾಗಿ ಲತೀಶ್, ಕಾರ್ಯದರ್ಶಿಯಾಗಿ ಉಮೇಶ್, ಜತೆ ಕಾರ್ಯದರ್ಶಿಯಾಗಿ ಸುಕೇಶ್, ಕೋಶಾಧಿಕಾರಿಯಾಗಿ ಪ್ರಕಾಶ್, ಕ್ರೀಡಾ ಕಾರ್ಯದರ್ಶಿಯಾಗಿ ಚಂದ್ರಹಾಸ, ಜತೆ ಕಾರ್ಯದರ್ಶಿಯಾಗಿ ಉಮೇಶ್ ಸಂಘಟನಾ ಕಾರ್ಯದರ್ಶಿಯಾಗಿ ನಾರಾಯಣ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಮೋಹನ್ ಬಡಗಬೆಳ್ಳೂರು, ರಾಜಣ್ಣ ಚೆಂಡ್ತಿಮಾರ್, ಸತೀಶ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಚಿದಾನಂದ, ನಾಗೇಶ್, ಶಶಿಧರ, ಜಯಂತಿ, ಜಾನಕಿ, ವೆಂಕಟೇಶ, ಮತ್ತು ಸಂದೇಶ್ ಅವರನ್ನು ಆರಿಸಲಾಯಿತು.
Next Story





