ಅಡ್ಕರೆ ಪಡ್ಪು ಗ್ರೀನ್ ವ್ಯೂ ಪಿಯು ಕಾಲೇಜಿಗೆ 'ಮೀಫ್'ನಿಂದ ಅತ್ಯುತ್ತಮ ಪ.ಪೂ ಕಾಲೇಜು ಪ್ರಶಸ್ತಿ

ಮಂಗಳೂರು, ಜು.24: ಕೊಣಾಜೆಯ ಅಡ್ಕರೆ ಪಡ್ಪು ಜಮೀಯ್ಯತುಲ್ ಫಲಾಹ್ ಗ್ರೀನ್ ವ್ಯೂ ಪಿಯು ಮಹಿಳಾ ಕಾಲೇಜಿಗೆ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ(MEIF) ನೀಡುವ 2022-23ನೇ ಸಾಲಿನ ದ. ಕ. ಹಾಗೂ ಉಡುಪಿ ಜಿಲ್ಲೆಗಳ ಅತ್ಯುತ್ತಮ ಪಿಯು ಕಾಲೇಜು ಪ್ರಶಸ್ತಿ ಲಭಿಸಿದೆ.
ಮಂಗಳೂರಿನ ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಇತ್ತೀಚೆಗೆ ನಡೆದ ಮೀಫ್ ಎಕ್ಸಲೆನ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪ್ರಶಸ್ತಿ ನೀಡಿ ಗೌರವಿಸಿದರು.
ಇದಲ್ಲದೆ ಕಾಲೇಜ್ ಗೆ ಪಿಯು ಕಾಲೇಜು ವಾಣಿಜ್ಯ ವಿಭಾಗದಲ್ಲಿ 2ನೇ ಅತ್ಯುನ್ನತ ಡಿಸ್ಟಿಂಕ್ಷನ್ ಪ್ರಶಸ್ತಿ ಗಳಿಸಿದೆ.
ವಾಣಿಜ್ಯ ವಿಭಾಗದಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ್ದ ಸುಮಯ್ಯತ್ ನಶ್ವ 2ನೇ ಅತ್ಯುನ್ನತ ಡಿಸ್ಟಿಂಕ್ಷನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಅಧ್ಯಕ್ಷ ಶಬೀ ಅಹ್ಮದ್ ಖಾಝಿ, ಕಾಲೇಜು ಸಂಚಾಲಕರ ಪರ್ವೀಝ್ ಅಲಿ, ಪ್ರಾಂಶುಪಾಲ ಅಬೂಬಕರ್ ಕೆ., ಉಪ ಪ್ರಾಂಶುಪಾಲೆ ಅಸ್ಮಾ ಬಾನು, ಉಪನ್ಯಾಸಕಿಯರಾದ ರಶ್ಮಿ ಸೋನಿಯಾ ಡಿಸೋಜ, ವಿದ್ಯಾಲಕ್ಷ್ಮಿ, ರಶ್ಮಿ ಪ್ರಶಸ್ತಿ ಸ್ವೀಕರಿದರು.