ಅತ್ತಾವರ: ಅಪಾರ್ಟ್ಮೆಂಟ್ ನಲ್ಲಿ ಬೆಂಕಿ ಆಕಸ್ಮಿಕ; ಮಹಿಳೆಗೆ ಗಂಭೀರ ಗಾಯ

ಸಾಂದರ್ಭಿಕ ಚಿತ್ರ
ಮಂಗಳೂರು, ನ. 28: ನಗರದ ಅತ್ತಾವರದ ಅಪಾರ್ಟ್ ಮೆಂಟೊಂದರಲ್ಲಿ ಮಂಗಳವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದ್ದು, ವೃದ್ಧೆಯೊಬ್ಬರು ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ವರದಿಯಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಇನ್ನೊಬ್ಬರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಮನೆಯಲ್ಲಿ ಹಲವು ಮಂದಿಯಿದ್ದು, ಘಟನೆ ಸಂಭವಿಸಿದ ತಕ್ಷಣ ಅವರು ಹೊರಗೆ ಬಂದು ಪಾರಾಗಿದ್ದಾರೆ. ಆದರೆ ವೃದ್ಧೆಯೊಬ್ಬರು ಬೆಡ್ ರೂಮ್ನಲ್ಲಿದ್ದ ಕಾರಣ ಹೊರಗೆ ಬರಲಾಗದೆ ಸಿಲುಕಿದ್ದರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗಿದೆ.
ಬೆಂಕಿ ಅನಾಹುತದಿಂದ ಮನೆಯೊಳಗಿನ ಪೀಠೋಪಕರಣ ಗಳು ಸುಟ್ಟು ಕರಕಲಾಗಿವೆ ಎಂದು ಪಾಂಡೇಶ್ಚರ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story





