ಬಳಕುಂಜೆ: ಸಂತ ಪಾವ್ಲರ ದೇವಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಮೂಲ್ಕಿ: ಬಳಕುಂಜೆಯ ಸಂತ ಪಾವ್ಲರ ದೇವಾಲಯದ ವತಿಯಿಂದ ಕ್ಯಾನ್ಸರ್ ಜಾಗೃತಿ ಹಾಗೂ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ರವಿವಾರ ದೇವಾಲಯದ ವಠಾರದಲ್ಲಿ ಆಚರಿಸಲಾಯಿತು.
ವೆರೋನಿಕಾ ಸ್ತ್ರೀ ಸಂಘಟನೆ, ಮಹಿಳಾ ಆಯೋಗ ಮತ್ತು ಕಥೋಲಿಕ್ ಸಭಾ ಬಳಕುಂಜೆ ಘಟಕದ ನೇತೃತ್ವದಲ್ಲಿ, ಕನಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಮಂಗಳೂರು, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಕರ್ನಾಟಕ ಹಾಗೂ ಸಿಒಡಿಪಿ ‘ಸ್ಪರ್ಶ’ ಕ್ಯಾನ್ಸರ್ ವಿರೋಧ ಅಭಿಯಾನದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಪಾವ್ಲರ ದೇವಾಲಯದ ವಂ. ಫಾ. ಪಾವ್ಲ್ ಸೆಕ್ವೇರಾ ಅವರು, ಕುಟುಂಬ ಮತ್ತು ಸಮಾಜದಲ್ಲಿ ಸ್ತ್ರೀಯರು ದೀಪದಂತೆ ಬೆಳಗುತ್ತಾರೆ ಎಂದು ಹೇಳಿದರು.
ಕನಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಸರಸ್ವತಿ ಅವರು ಕ್ಯಾನ್ಸರ್ ಜಾಗೃತಿ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಇಎನ್‌ಟಿ ತಜ್ಞರಾದ ಡಾ. ಪ್ರತೀಕ್ಷಾ, ಸಾರ್ವಜನಿಕ ಸಂಪರ್ಕಾಧಿಕಾರಿ ರಶೀದ್, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಸುನಿತಾ ಕೆ., ಸಿಒಡಿಪಿಯ ಪುಷ್ಪವೇಣಿ, ಬಳಕುಂಜೆಯ ಪ್ರಾವಿಡೆನ್ಸ್ ಕಾನ್ವೆಂಟ್‌ನ ಸುಪೀರಿಯರ್ ಸಿಸ್ಟರ್ ಫೆಲ್ಸಿನ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿ ಡಿಸೋಜಾ ಹಾಗೂ ಎಲ್ಲಾ ಆಯೋಗಗಳ ಸಂಯೋಜಕಿ ಡಾ. ಫ್ರೀಡಾ ರೊಡ್ರಿಗಸ್ ಉಪಸ್ಥಿತರಿದ್ದರು.
ವೆರೋನಿಕಾ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಪ್ರೆಸಿಲ್ಲಾ ಡಿಸೋಜಾ ಸ್ವಾಗತಿಸಿದರು. ಕಥೋಲಿಕ್ ಸಭಾ ಅಧ್ಯಕ್ಷೆ ಅನಿತಾ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಲವೀನಾ ಸೆರಾವೊ ಕಾರ್ಯಕ್ರಮ ನಿರೂಪಿಸಿದರು.
ಈ ಶಿಬಿರದಲ್ಲಿ 115 ಮಂದಿ ಕ್ಯಾನ್ಸರ್ ತಪಾಸಣೆಗೊಳಗಾಗಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.







