ಬೆಳ್ತಂಗಡಿ : ಎಚ್.ಐ.ಎಫ್ ಪ್ರಾಜೆಕ್ಟ್ ಬೂಂದ್ ವತಿಯಿಂದ 13ನೇ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಬೆಳ್ತಂಗಡಿ: ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ ಹೈಲ್ಯಾಂಡ್ ಇಸ್ಲಾಮಿಕ್ ಫೋರಂ (HIF India) ವತಿಯಿಂದ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಇಂದಬೆಟ್ಟು ಗ್ರಾಮ ಪಂಚಾಯತ್ ಗ್ರಾಮಾಭಿವೃದ್ಧಿ ಅಧಿಕಾರಿ ರಶ್ಮಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಇಂದಬೆಟ್ಟು ಆರೋಗ್ಯ ಕೇಂದ್ರದ ರಂಜಿತ್, ಇಂದಬೆಟ್ಟು ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಡಿ. ಸುವರ್ಣ (ಬೆದ್ರಬೆಟ್ಟು), ಗ್ರಾಮ ಪಂಚಾಯತ್ ಮಾಜಿ ಸದಸ್ಯ ಲತೀಶ್ ಸುವರ್ಣ, ಸ್ಥಳೀಯ ಧರ್ಮಗುರು ಸತ್ತಾರ್ ಸಖಾಫಿ, ಇಂದಬೆಟ್ಟು ಮಸ್ಜಿದ್ ಅಧ್ಯಕ್ಷ ಮುತ್ತಲಿಬ್, ಇಂದಬೆಟ್ಟು ರಿಕ್ಷಾ ಮಾಲಕ-ಚಾಲಕ ಸಂಘಟನೆಯ ಪದಾಧಿಕಾರಿ ಹಾರಿಸ್ ಎರ್ಮಲಾ ಹಾಗೂ ಕಿಲ್ಲೂರು ಎಂಜೆಎಂ ಆಡಳಿತ ಸಮಿತಿ ಸದಸ್ಯ ಬದ್ರುದ್ದೀನ್ ಕಿಲ್ಲೂರು ಉಪಸ್ಥಿತರಿದ್ದರು.
ಕಿಲ್ಲೂರು ಎಂಜೆಎಂ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಅಝೀಝ್ ಝುಹ್ರಿ ಕಿಲ್ಲೂರು ಅವರು ದಾನಿಗಳನ್ನು ಪರಿಚಯಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು.
ಪ್ರಾಜೆಕ್ಟ್ ಬೂಂದ್ ವತಿಯಿಂದ ನಗರದ ಸಾರ್ವಜನಿಕ ಸ್ಥಳಗಳಲ್ಲಿ ವಾಟರ್ ಡಿಸ್ಪೆನ್ಸರ್, ಬಾವಿ, ಬೋರ್ವೆಲ್ ಮುಂತಾದ ನೀರಿನ ಯೋಜನೆಗಳನ್ನು ಹಮ್ಮಿಕೊಂಡು ಇದುವರೆಗೆ 13 ಸ್ಥಳಗಳಲ್ಲಿ ಅಳವಡಿಸಲಾಗಿದೆ ಎಂದು ಪ್ರಾಜೆಕ್ಟ್ ಸಂಚಾಲಕ ನಝೀಮ್ ಎ.ಕೆ. ತಿಳಿಸಿದ್ದಾರೆ.







