ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ಅ. 11ರಂದು ‘Graduation Day 2025’

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಬಳಿಯ ಇನ್ನೋಳಿಯ ಬ್ಯಾರೀಸ್ ನಾಲೆಜ್ ಕ್ಯಾಂಪಸ್ ನಲ್ಲಿ ಅಕ್ಟೋಬರ್ 11ರಂದು “Graduation Day 2025” ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT), ಬ್ಯಾರೀಸ್ ಎನ್ವಿರೋ-ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (BEADS), ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸ್ (BIES) ಮತ್ತು ಬಿಐಟಿ ಪಾಲಿಟೆಕ್ನಿಕ್ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿವೆ.
ಇದು ಬಿಐಟಿಗೆ 13ನೇ Graduation Day, BEADS 6ನೇ ಹಾಗೂ BEISಗೆ ಮೊದಲನೆಯ Graduation Day ಎಂಬ ಆಗಿದೆ. ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ಗೆ ಇದು ಒಂದು ಮೈಲಿಗಲ್ಲಿನ ಸಂದರ್ಭವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಿಯೋನಿಕ್ಸ್ ಅಧ್ಯಕ್ಷರು ಹಾಗೂ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ ಅವರು ಭಾಗವಹಿಸಲಿದ್ದಾರೆ. ಎನ್‌ಐಟಿಕೆ ಸುರತ್ಕಲ್‌ನ ಇಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರೊ. ಉದಯಕುಮಾರ್ ಆರ್. ಯರಗಟ್ಟಿ ಹಾಗೂ ಎಂಎನ್‌ಐಟಿ ಜೈಪುರದ ಮಾಜಿ ನಿರ್ದೇಶಕರು ವಿಶೇಷ ಅತಿಥಿಗಳಾಗಿ ಹಾಜರಿರಲಿದ್ದಾರೆ.
ಐಎನ್‌ಹಾಫ್ ಅಧ್ಯಕ್ಷ ಅರ್. ಕೀರ್ತಿ ಶಾ ಮತ್ತು 99ಗೇಮ್ಸ್ ಹಾಗೂ ರೋಬೋಸಾಫ್ಟ್‌ನ ಸ್ಥಾಪಕರಾದ ಶ್ರೀ ರೋಹಿತ್ ಭಟ್ ಅವರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ಅಧ್ಯಕ್ಷ ಶ್ರೀ ಸೈಯದ್ ಮೊಹಮ್ಮದ್ ಬ್ಯಾರಿ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಎಂಜಿನಿಯರಿಂಗ್, ವಾಸ್ತುಶಿಲ್ಪ, ವಿಜ್ಞಾನ ಹಾಗೂ ಇತರ ವಿಭಾಗಗಳ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿಗಳು ಹಾಗೂ ಶೈಕ್ಷಣಿಕ ಶ್ರೇಷ್ಠತೆ ಪ್ರಶಸ್ತಿಗಳು ಪ್ರದಾನಗೊಳ್ಳಲಿವೆ.
ಕಾರ್ಯಕ್ರಮದಲ್ಲಿ ಡಾ. ಮಂಜುರ್ ಬಾಷಾ (ಪ್ರಾಂಶುಪಾಲರು, BIT), ಅರ್. ಖಲೀಲ್ ರಝಾಕ್ (ಪ್ರಾಂಶುಪಾಲರು, BEADS), ಡಾ. ಅಝೀಜ್ ಮುಸ್ತಫಾ (ಪ್ರಾಂಶುಪಾಲರು, BIES), ಡಾ. ಪೃಥ್ವಿರಾಜ್ (ನಿರ್ದೇಶಕರು, BIT ಪಾಲಿಟೆಕ್ನಿಕ್) ಹಾಗೂ ಪ್ರೊ. ಅಬ್ದುಲ್ ಲತೀಫ್ (ಪ್ರಾಂಶುಪಾಲರು, BIPU) ಸೇರಿದಂತೆ ಅಧ್ಯಾಪಕರು, ಹಳೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಲಿದ್ದಾರೆ.







