ಬೋಳಾರ| ವೆಲ್ಫೇರ್ ಅಸೋಸಿಯೇಷನ್ (ಶಾದಿ ಮಹಲ್) ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಮಕ್ಬೂಲ್ ಅಹ್ಮದ್ ಕುದ್ರೋಳಿ
ಮಂಗಳೂರು: ವೆಲ್ಫೇರ್ ಅಸೋಸಿಯೇಷನ್ (ಶಾದಿ ಮಹಲ್) ಬೋಳಾರ ಇದರ ವಾರ್ಷಿಕ ಮಹಾಸಭೆಯು ಶಾದಿ ಮಹಲ್ ನಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ 2025-2027ನೇ ಸಾಲಿಗೆ ಪದಾಧಿಕಾರಿಗಳ ಚುನಾವಣೆ ನಡೆಯಿತು.
ಅಧ್ಯಕ್ಷರಾಗಿ ಮಕ್ಬೂಲ್ ಅಹ್ಮದ್ ಕುದ್ರೋಳಿ, ಉಪಾಧ್ಯಕ್ಷರಾಗಿ ಎಸ್.ಎ. ಖಲೀಲ್ ಅಹ್ಮದ್ ಮತ್ತು ಅಲಿ ಸಾಹೇಬ್, ಕಾರ್ಯದರ್ಶಿಯಾಗಿ ಆಬಿದ್ ಅಸ್ಗರ್, ಖಜಾಂಚಿಯಾಗಿ ಅನ್ವರ್ ಸಾಹೇಬ್ ಬೋಳಾರ, ಜತೆ ಕಾರ್ಯದರ್ಶಿಯಾಗಿ ಆಸಿಫ್ ಶರ್ಫುದ್ದೀನ್ ಮತ್ತು ಮಾಧ್ಯಮ ಪ್ರತಿನಿಧಿಯಾಗಿ ಝಾಹಿದ್ ಎಮ್.ಎಸ್. ಅವರು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಗೆ ಒಟ್ಟು 21 ಮಂದಿ ಸದಸ್ಯರು ಚುನಾಯಿತರಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.
Next Story





