ಮಂಗಳೂರು | ʼಭಾರತದ ಸಾಮಾಜಿಕ ವಿಕಸನ - ಮುಸ್ಲಿಮರು’ ಕೃತಿ ಬಿಡುಗಡೆ

ಮಂಗಳೂರು : ಕೆ.ಟಿ.ಹುಸೈನ್ ಬರೆದಿರುವ ಅರಫಾ ಮಂಚಿ ಅನುವಾದಿಸಿರುವ ‘ಭಾರತದ ಸಾಮಾಜಿಕ ವಿಕಸನ ಮತ್ತು ಮುಸ್ಲಿಮರು’ ಕೃತಿ ಬುಧವಾರ ಬಿಡುಗಡೆಗೊಂಡಿತು.
ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯ ವತಿಯಿಂದ ನಗರದ ಪುರಭವನದಲ್ಲಿ ಭಾರತದ ಮುಸ್ಲಿಮರು ಮತ್ತು ಇತಿಹಾಸ ವಿಷಯದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಕೃತಿ ಬಿಡುಗಡೆಗೊಂಡಿತು.
ಖ್ಯಾತ ಇತಿಹಾಸ ತಜ್ಞ ಡಾ. ರಾಮ್ ಪುನಿಯಾನಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮುಖ್ಯ ಅತಿಥಿಯಾಗಿದ್ದರು. ಯೆನೆಪೊಯ ವಿಶ್ವವಿದ್ಯಾನಿಲಯದ ಸ್ಥಾಪಕ ಉಪಕುಲಪತಿ ಪ್ರೊ.ಸೈಯದ್ ಅಕೀಲ್ ಅಹ್ಮದ್ ವಿಚಾರಗೋಷ್ಠಿಯ ಉದ್ಘಾಟನೆ ನೆರವೇರಿಸಿದರು.
ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು.
ಖಾಝಿ ಎ ಶರೀಅತ್ ಮೌಲಾನ ಮುಫ್ತಿ ಶೇಖ್ ಮುತಹ್ಹರ್ ಹುಸೈನ್ ಖಾಸಿಮೀ, ಬೋಳಂಗಡಿ ಹವ್ವಾ ಜುಮಾ ಮಸೀದಿ ಖತೀಬ್ ಮೌಲನಾ ಯಯ್ಯಾ ತಂಙಳ್ ಮದನಿ, ಶಾಂತಿ ಪ್ರಕಾಶನ ಟ್ರಸ್ಟ್ ನ ಕಾರ್ಯದರ್ಶಿ ಅಬ್ದುಸ್ಸಲಾಮ್ ಯು, ಜಮಾಅತೆ ಇಸ್ಲಾಮೀ ಹಿಂದ್ ವಲಯ ಸಂಚಾಲಕ ಸ ಈದ್ ಇಸ್ಮಾಯಿಲ್, ಕೃತಿ ಅನುವಾದಕ ಅರಫಾ ಮಂಚಿ, ಜಮಾಅತೆ ಇಸ್ಲಾಮಿ ಹಿಂದ್ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಅಬ್ದುಲ್ ಕರೀಮ್, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರಾಧ್ಯಕ್ಷ ಕೆ.ಎಂ ಅಶ್ರಫ್ ಉಪಸ್ಥಿತರಿದ್ದರು.
ಬೆಂಗರೆ ಮಸ್ಜಿದ್ ಅನಸ್ ಬಿನ್ ಮಾಲಿಕ್ ಖತೀಬ್ ಅಬ್ದುಲ್ ಲತೀಫ್ ಆಲಿಯ ಕಿರಾಅತ್ ಪಠಿಸಿದರು.
ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು.







