ಸಿಎ ಪರೀಕ್ಷೆ: ಪೆರ್ನೆಯ ಮುಹಮ್ಮದ್ ಇಯಾಸ್ ಉತ್ತೀರ್ಣ

ಪುತ್ತೂರು: ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) 2025ರಲ್ಲಿ ನಡೆಸಿದ ಚಾರ್ಟರ್ಡ್ ಅಕೌಂಟೆಂಟ್ಸ್ (ಸಿ.ಎ) ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಮುಹಮ್ಮದ್ ಇಯಾಸ್ ಪ್ರಥಮ ಪ್ರಯತ್ನದಲ್ಲೇ ಗ್ರೂಪ್ ಒಂದು ಮತ್ತು ಗ್ರೂಪ್ ಎರಡರಲ್ಲಿ ಉತ್ತೀರ್ಣರಾಗಿದ್ದಾರೆ.
ಸಿಎ ಗಣೇಶ್ ರಾವ್ ಪಿ. ಮಾರ್ಗದರ್ಶನದಲ್ಲಿ ಕಳೆದ ಮೇ ತಿಂಗಳು ನಡೆದ ಸಿಎ ಅಂತಿಮ ಪರೀಕ್ಷೆಯನ್ನು ಇವರು ಬರೆದಿದ್ದರು.
ಪೆರ್ನೆ ನಿವಾಸಿ ಇಸ್ಮಾಯೀಲ್ ಮತ್ತು ರುಖ್ಯಾ ದಂಪತಿಯ ಪುತ್ರನಾಗಿರುವ ಮುಹಮ್ಮದ್ ಇಯಾಸ್ ಪೆರ್ನೆಯ ಶ್ರೀ ರಾಮಚಂದ್ರ ಪ್ರೌಢಶಾಲೆ, ಉಪ್ಪಿನಂಗಡಿಯ ಇಂದ್ರಪ್ರಸ್ಥ ಪಿಯು ಕಾಲೇಜು ಮತ್ತು ತ್ರಿಶಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
Next Story





