ಖುರ್ರತುಸ್ಸಾದಾತ್ ಅನುಸ್ಮರಣೆ ಹಾಗೂ ಉರೂಸ್ ಪ್ರಚಾರ ಸಭೆ

ಉಳ್ಳಾಲ: ಅಮೀನುದ್ದೀನ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅನುಸ್ಮರಣೆ ಹಾಗೂ ಖುರ್ರತುಸ್ಸಾದಾತ್ ಪ್ರಥಮ ಉರೂಸ್ ಕಾರ್ಯಕ್ರಮದ ಪ್ರಚಾರ ಸಭೆ ಮಾಸ್ತಿಕಟ್ಟೆ ಇಸ್ಲಾಮಿಕ್ ನಾಲೆಜ್ ಸೆಂಟರ್ ನಲ್ಲಿ ನಡೆಯಿತು.
ಕೂರತ್ ತಂಙಳ್ ರ ಸುಪುತ್ರ ಅಬ್ದುಲ್ ರಹಿಮಾನ್ ಮಸ್ಊದ್ ತಂಙಳ್ ದುಆ ನೆರವೇರಿಸಿದರು. ಉಳ್ಳಾಲ ದರ್ಗಾ ಸಮಿತಿ ಸದಸ್ಯ ಸಯ್ಯಿದ್ ಝಿಯಾದ್ ತಂಙಳ್ ಕಾ ರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಯುವ ಸಮೂಹವು ನಾಯಕತ್ವವನ್ನು ಅನುಸರಿಸುವ ಗುಣ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಮೀದ್ ಫೈಝಿ ಕಿಲ್ಲೂರು ಮುಖ್ಯ ಭಾಷಣ ಮಾಡಿದರು.
ಅಮೀನುದ್ದೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯು.ಎ.ಹುಸೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಈ ಕಾರ್ಯಕ್ರಮದಲ್ಲಿ ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ,ಕೋಶಾಧಿಕಾರಿ ನಾಝಿಮ್ ರಹ್ಮಾನ್, ಜೊತೆ ಕಾರ್ಯದರ್ಶಿ ಇಸ್ಹಾಕ್ ಪೇಟೆ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ, ,ಹಮೀದ್ ಪಟೇಲ್ ಬಾಗ್, ಅಬ್ದುಲ್ ರಹ್ಮಾನ್ ಅಕ್ಕರೆಕರೆ, ಬಶೀರ್ ಸಖಾಫಿ, ಸಯ್ಯಿದ್ ಖುಬೈಬ್ ತಂಙಳ್, ಶರೀಫ್ ಸಅದಿ,ಎಂ.ಸಿ.ಮುಹಮ್ಮದ್ ಫೈಝಿ ಪಟ್ಲ, ಸಯ್ಯಿದ್ ಜಲಾಲ್ ತಂಙಳ್, ಜುನೈದ್ ತಂಙಳ್, ಜಲಾಲ್ ಮದನಿ, ಮುಹಮ್ಮದ್ ಮದನಿ ಅಕ್ಕರೆ ಕೆರೆ,ಅಮೀನುದ್ದೀನ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಹಳೆ ಕೋಟೆ, ಕಾರ್ಯದರ್ಶಿ ಅಶ್ರಫ್, ರಹ್ಮತುಲ್ಲಾ, ಕೋಶಾಧಿಕಾರಿ ಇಮ್ರಾನ್ ಅಕ್ಕರೆ ಕೆರೆ, ಅಶ್ರಫ್ ಅಲೇಕಳ, ಮುಸ್ತಫಾ ಮಾರ್ಗ ತಲೆ,ಅಶ್ರಫ್ ಮೇಲಂಗಡಿ, ನಝೀರ್ ಮೇಲಂಗಡಿ, ಶರೀಫ್ ಮಂಚಿಲ ಮತ್ತಿತರರು ಉಪಸ್ಥಿತರಿದ್ದರು.







