ಕಂಟೇನರ್ ಸರಕು ನಿಲ್ದಾಣ- ಗೋದಾಮು ವ್ಯವಸ್ಥೆ: ಎನ್ಎಂಪಿಎಯಿಂದ ಸಿಡಬ್ಲುಸಿ ಮತ್ತು ಎಸ್ಡಿಸಿಎಲ್ ಜತೆ ಒಪ್ಪಂದ

ಮಂಗಳೂರು, ಜೂ. 27: ನವಮಂಗಳೂರು ಬಂದರು ಪ್ರಾಧಿಕಾರ(ಎನ್ಎಂಪಿಎ)ವು ಕಂಟೇನರ್ ಸರಕು ನಿಲ್ದಾಣ ಅಥವಾ ಸರಕು ಸಂಗ್ರಹಣಾ ಗೋದಾಮು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸೆಂಟ್ರಲ್ ವೇರ್ಹೌಸಿಂಗ್ ಕಾರ್ಪೊರೇಶನ್ (ಸಿಡಬ್ಲುಸಿ) ಮತ್ತು ಸಾಗರಮಾಲ ಡೆವಲಪ್ಮೆಂಟ್ ಕಂಪನಿ ಲಿಮಿಟೆಡ್ (ಎಸ್ಡಿಸಿಎಲ್) ಜತೆ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿದೆ.
ಎನ್ಎಂಪಿಎ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು, ಸಿಡಬ್ಲುಸಿ ಆಡಳಿತ ನಿರ್ದೇಶಕ ಅಮಿತ್ ಕುಮಾರ್ ಸಿಂಗ್ ಹಾಗೂ ಎಸ್ಡಿಸಿಎಲ್ನ ಆಡಳಿತ ನಿರ್ದೇಶಕ ದಿಲೀಪ್ ಕುಮಾರ್ ಗುಪ್ತಾ ಅವರು ಪಣಂಬೂರಿನ ಎನ್ಎಂಪಿಎ ಕಚೇರಿ ಸಭಾಂಗಣದಲ್ಲಿ ಜಂಟಿ ಒಪ್ಪಂದಕ್ಕೆ ಸಹಿ ಹಾಕಿದರು.
Next Story







