ಧರ್ಮಸ್ಥಳ ಪ್ರಕರಣ : ಚಿನ್ನಯ್ಯನ ಬಂಧನ ಹಿನ್ನೆಲೆ; ಮಂಗಳೂರಿನಿಂದ ಆಗಮಿಸಿದ ವಕೀಲರು

ಚಿನ್ನಯ್ಯನ ಎಸ್ಐಟಿ ಕಸ್ಟಡಿ ಅವಧಿ ಇಂದು ಮುಕ್ತಾಯ
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಚಿನ್ನಯ್ಯ ಪರ ವಕಾಲತ್ತು ವಹಿಸಲು ಮಂಗಳೂರಿನಿಂದ ವಕೀಲರು ಬೆಳ್ತಂಗಡಿ ಕೋರ್ಟ್ ಗೆ ಆಗಮಿಸಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯನನ್ನು ಆ.23 ರಂದು ಬಂಧಿಸಿ ಎಸ್‌ಐಟಿ ಅಧಿಕಾರಿಗಳ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕಸ್ಟಡಿಗೆ ಪಡೆದಿದ್ದರು.
ಈ ವೇಳೆ ಆರೋಪಿ ಚಿನ್ನಯ್ಯ ನ್ಯಾಯಾಧೀಶರಲ್ಲಿ ನನಗೆ ಉಚಿತ ವಕೀಲರು ಬೇಕೆಂದು ಮನವಿ ಮಾಡಿದ್ದ. ಸೆ.3 ರಂದು ಕಸ್ಟಡಿ ಅಂತ್ಯವಾಗುವ ಹಿನ್ನಲೆಯಲ್ಲಿ ಮಂಗಳೂರು ಉಚಿತ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಿಶೋರ್ ನೇತೃತ್ವದಲ್ಲಿ ವಕೀಲ ತಂಡ ಚಿನ್ನಯ್ಯ ಪರ ವಕಾಲತ್ತು ನಡೆಸಲು ಬೆಳ್ತಂಗಡಿ ಕೋರ್ಟ್ ಗೆ ಆಗಮಿಸಿದೆ.
ಸಂಜೆ 3 ಗಂಟೆಗೆ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಚಿನ್ನಯ್ಯನ ಪರ ವಕೀಲರ ತಂಡ ವಾದ ಮಂಡಿಸಲಿದೆ ಎಂದು ತಿಳಿದು ಬಂದಿದೆ.
Next Story





