ʼಧರ್ಮಸ್ಥಳʼ ಅಪರಾಧ ಕೃತ್ಯಗಳ ಬಗ್ಗೆ ವಿಸ್ತೃತ ತನಿಖೆ ನಡೆಸಿ : ಕರ್ನಾಟಕ ಸರಕಾರಕ್ಕೆ ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಆಗ್ರಹ
"ಅನಾಮಧೇಯ ವ್ಯಕ್ತಿಗೆ ರಕ್ಷಣೆ ನೀಡಿ"

ಅನ್ನಪೂರ್ಣ ದೇವಿ | PC : PTI
ಹೊಸದಿಲ್ಲಿ: ಧರ್ಮಸ್ಥಳ ಗ್ರಾಮದ ಅಪರಾಧ ಕೃತ್ಯಗಳ ಬಗ್ಗೆ ವಿಸ್ತೃತ ತನಿಖೆ ಮಾಡಿ, ಅನಾಮಧೇಯ ವ್ಯಕ್ತಿಗೆ ರಕ್ಷಣೆ ನೀಡಿ ಎಂದು ಕೇಂದ್ರ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿ ಕರ್ನಾಟಕ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು TimesNow ಸುದ್ದಿ ವಾಹಿನಿಯ ಜೊತೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ 1995 ರಿಂದ 2014 ರವರೆಗೆ ಈ ರೀತಿಯ ಘಟನೆಗಳು ದೀರ್ಘಕಾಲದವರೆಗೆ ನಡೆದಿರುವುದು ಅಚ್ಚರಿ ತಂದಿದೆ. ಇದುವರೆಗೆ ಯಾರಿಗೂ ಈ ಬಗ್ಗೆ ತಿಳಿಯದಿರುವುದು ನಿಜಕ್ಕೂ ಗಂಭೀರವಾದ ವಿಷಯ ಎಂದು ಅವರು ಹೇಳಿದ್ದಾರೆ.
ಈಗ ಅನಾಮಧೇಯ ವ್ಯಕ್ತಿ ಈ ಕುರಿತ ಮಾಹಿತಿ ಬಹಿರಂಗಗೊಳಿಸಿದ್ದಾರೆ. ಕರ್ನಾಟಕ ಸರಕಾರವು ಮಾಹಿತಿ ನೀಡಿದ ಸಾಕ್ಷಿಗೆ ರಕ್ಷಣೆ ನೀಡಬೇಕು. ಈ ವಿಷಯದ ಬಗ್ಗೆ ಸಂಪೂರ್ಣ ಮತ್ತು ವಿಸ್ತೃತವಾದ ತನಿಖೆ ನಡೆಸಬೇಕು. ತಕ್ಷಣ ತನಿಖೆ ಕೈಗೊಳ್ಳಬೇಕು ಎಂದು ಅವರು ಕರ್ನಾಟಕ ಸರಕಾವರನ್ನು ಆಗ್ರಹಿಸಿದ್ದಾರೆ.
Next Story







