ಧರ್ಮಸ್ಥಳ : ಎಸ್ಐಟಿ ಕಚೇರಿಗೆ ಉದಯ್ ಜೈನ್ ಹಾಜರು

ಬೆಳ್ತಂಗಡಿ: ಸೌಜನ್ಯ ಕೊಲೆ ಪ್ರಕರಣದಲ್ಲಿ ಆಕೆಯ ಕುಟುಂಬಸ್ಥರಿಂದ ಆರೋಪ ಎದುರಿಸುತ್ತಿರುವ ಉದಯ ಜೈನ್ ಅವರು ಎಸ್.ಐ.ಟಿ ಅಧಿಕಾರಿಗಳು ನೀಡಿರುವ ಸೂಚನೆಯಂತೆ ವಿಚಾರಣೆಗಾಗಿ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ.
ಎಸ್.ಐ.ಟಿ ಅಧಿಕಾರಿಗಳು ವಿಚಾರಣೆಗಾಗಿ ಎಸ್.ಐ.ಟಿ ಕಚೇರಿಗೆ ಬರುವಂತೆ ನನಗೆ ಕರೆ ಮಾಡಿದ್ದರು. ಅದರಂತೆ ಕಚೇರಿಗೆ ಆಗಮಿಸಿದ್ದೇನೆ. ನನ್ನೊಂದಿಗೆ ಧೀರಜ್ ಕೆಲ್ಲ ಹಾಗೂ ಮಲ್ಲಿಕ್ ಜೈನ್ ಅವರಿಗೂ ಹಾಜರಾಗಲು ಸೂಚಿಸಿರುವುದಾಗಿ ಉದಯ್ ಜೈನ್ ತಿಳಿಸಿದ್ದಾರೆ.
Next Story





