ಡಾ. ಎಸ್. ಎಂ. ರಿಹಾ ಪರ್ವಿನ್ ಗೆ ಪಿ ಎಚ್ ಡಿ ಪದವಿ

ಮಂಗಳೂರು : ಮಂಗಳೂರಿನ ಯೆನೆಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿಯ ಯನೆಪೋಯ ಹಣಕಾಸು ಮತ್ತು ಉದ್ಯಮಶೀಲತಾ ಅಭಿವೃದ್ಧಿ ಸಂಶೋಧನಾ ಕೇಂದ್ರ (ಯೆನ್-ರಿಫೈನ್ಡ್) ದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಡಾ. ಎಸ್. ಎಂ. ರಿಹಾ ಪರ್ವಿನ್ ಅವರಿಗೆ ಪಿ ಎಚ್ ಡಿ ಪ್ರದಾನ ಮಾಡಲಾಗಿದೆ.
ಡಾ. ನಿಯಾಝ್ ಪಣಕಜೆ ಮತ್ತು ಡಾ. ನಾರಾಯಣ್ ಕಾಯರ್ಕಟ್ಟೆ ಅವರ ಮಾರ್ಗದರ್ಶನದಲ್ಲಿ “ಇಫೆಕ್ವಿವ್ನೆಸ್ ಆಫ್ ಫಿನಾಶ್ಷಿಯಲ್ ಲಿಟರಸಿ ಆಂಡ್ ಸೋಷಿಯಲ್ ಇಂಕ್ಲೂಷನ್ ಇನ್ ಸ್ಟಾಕ್ ಮಾರ್ಕೆಟ್ ಪಾರ್ಟಿಸಿಪೇಷನ್ ; ಅಸ್ಸೆಸ್ಸಿಂಗ್ ದ ಮೀಡಿಯೇಟಿಂಗ್ ರೋಲ್ ಆಫ್ ಡಿಜಿಟಲ್ ಇಂಕ್ಲೂಷನ್” ಎಂಬ ವಿಷಯದಲ್ಲಿ ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಶ್ರೀನಿವಾಸ್ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪದವಿ ನೀಡಲಾಗಿದೆ.
ಡಾ. ರಿಹಾ ಅವರು ಶೈಕ್ಷಣಿಕ ಸಂಶೋಧನೆ, ಸ್ಕೋಪಸ್, ವೆಬ್ ಆಫ್ ಸೈನ್ಸ್ (WoS), ABDC ಮತ್ತು UGC ಕೇರ್ ಲಿಸ್ಟೆಡ್ ಜರ್ನಲ್ಗಳಲ್ಲಿ Q1, Q2, ಮತ್ತು ABDC-B ಮತ್ತು C ವಿಭಾಗಗಳಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಅವರು ಒಟ್ಟು 21 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಉಡುಪಿಯ ಬ್ರಹ್ಮಾವರದ ರಿಹಾ ಪರ್ವಿನ್ ಅವರು ವೃತ್ತಿಯಲ್ಲಿ ಚಾಲಕರಾಗಿರುವ ಎಸ್.ಎಂ. ರಫೀಕ್ ಮತ್ತು ಗೃಹಿಣಿಯಾಗಿರುವ ಹಸೀನಾ ಬಾನು ಅವರ ಪುತ್ರಿ.