ಉತ್ತಮ ಕ್ರೀಡಾಪಟುಗಳಿಗೆ ನಗರ ಪ್ರದೇಶದಲ್ಲಿ ಕೋಚಿಂಗ್ ವ್ಯವಸ್ಥೆಯೊಂದಿಗೆ ವಿದ್ಯಾಭ್ಯಾಸ: ಮೂಸಬ್ಬ ಪಿ. ಬ್ಯಾರಿ
ʼಮೀಫ್ʼ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾ ಕೂಟಕ್ಕೆ ಮೂಡುಬಿದಿರೆ ಸ್ವರಾಜ್ ಮೈದಾನದಲ್ಲಿ ಚಾಲನೆ

ಮೂಡುಬಿದಿರೆ: ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಮತ್ತು ಅಲ್ ಫುರ್ಖಾನ್ ಆಂಗ್ಲ ಮಾಧ್ಯಮ ಶಾಲೆಗಳ ಜಂಟಿ ಆಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಮೂಡುಬಿದಿರೆ ಸ್ವರಾಜ್ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಮಾತನಾಡಿ, ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳಿಗೆ ನಗರ ಪ್ರದೇಶದಲ್ಲಿ ಕ್ರೀಡಾ ತರಬೇತಿಯೊಂದಿಗೆ ಉನ್ನತ ವ್ಯಾಸಂಗಕ್ಕೆ ಮೀಫ್ ಅವಕಾಶ ಕಲ್ಪಿಸಲಾಗುವುದು ಎಂದರು.
ಉದ್ಘಾಟನೆ ಮಾಡಿ ಕ್ರೀಡಾಪಟುಗಳ ವಂದನೆ ಸ್ವೀಕರಿಸಿದ ಫಾರ್ಚೂನ್ ಬಿಲ್ಡರ್ಸ್ ಚೇರ್ಮನ್ ಅಬುಲ್ ಅಲಾ ಪುತ್ತಿಗೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಕೊಂಡಾಗ ಮಾದಕ ದ್ರವ್ಯ ಮೊದಲಾದ ದುಶ್ಚಟಗಳಿಂದ ದೂರವಿರಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಕಣ್ಣೂರು, ಕ್ರೀಡಾ ಸಂಯೋಜಕ ಶಾರಿಕ್ ಕುಂಜತ್‌ಬೈಲ್, ಅಲ್ ಫುರ್ಖಾನ್ ಟ್ರಸ್ಟಿ ಮಹಮ್ಮದ್ ಅಶ್ಫಾಕ್, ಅರೇಬಿಕ್ ಮುಖ್ಯಸ್ಥ ಶೇಖ್ ಅಜಂ ಮದನಿ, ಮಹಮ್ಮದ್ ಸಿರಾಜ್ ಮಣೆಗಾರ ಜೋಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಅಲ್ ಫುರ್ಖಾನ್ ಮ್ಯಾನೇಜಿಂಗ್ ಟ್ರಸ್ಟಿ ಮಹಮ್ಮದ್ ಶಹಾಮ್ ಸ್ವಾಗತಿಸಿ, ಶಿಕ್ಷಕ ಮಹಮ್ಮದ್ ನಸೀರ್ ನಿರೂಪಿಸಿ, ವಂದಿಸಿದರು.
MEIF INTER-SCHOOL ATHLETICS MEET 2023-24
ಚಾಂಪಿಯನ್ಸ್: ಹಝ್ರತ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಉಳ್ಳಾಲ
ರನ್ನರ್ಸ್ ಅಪ್: ಬ್ಯಾರೀಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮಂಗಳೂರು
ವೈಯಕ್ತಿಕ ಚಾಂಪಿಯನ್‌ಶಿಪ್ : ಶೇರ್ ಸಿಂಗ್, ನೋಬಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕುಂಜತ್‌ಬೈಲ್







