ಹಯಾತುಲ್ ಇಸ್ಲಾಂ ಮದರಸ ಬೀಟಿಗೆ (ಕಕ್ಕಿಂಜೆ) ಪದಾಧಿಕಾರಿಗಳ ಆಯ್ಕೆ

ಅಬ್ದುಲ್ ಖಾದರ್, ನಾಸಿರ್ ಡಿ.ಕೆ.
ಕಕ್ಕಿಂಜೆ: ಹಯಾತುಲ್ ಇಸ್ಲಾಂ ಮದರಸ ಬೀಟಿಗೆಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮದರಸ ಸಭಾಂಗಣದಲ್ಲಿ ನಡೆಯಿತು.
ಈ ವೇಳೆ ಅಧ್ಯಕ್ಷರಾಗಿ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಡಿ.ಕೆ., ಗೌರವಾಧ್ಯಕ್ಷರಾಗಿ ಇಸ್ಮಾಯಿಲ್, ಉಪಾಧ್ಯಕ್ಷರಾಗಿ ಲತೀಫ್ ಡಿ.ಕೆ., ಜೊತೆಯ ಕಾರ್ಯದರ್ಶಿಯಾಗಿ ಅಹಮ್ಮದ್ ಕಬೀರ್ ಹಾಗೂ ಕೋಶಾಧಿಕಾರಿಯಾಗಿ ಮುಹಮ್ಮದ್ ತೌಸೀಫ್ ಅವರನ್ನು ಆಯ್ಕೆ ಮಾಡಲಾಯಿತು.
ಅಹ್ಮದ್ ಕುಂಞಿ ಮುಸ್ಲಿಯಾರ್ ಬೀಟಿಗೆ ದುವಾ ನೆರವೇರಿಸಿದರು. ಮದರಸ ಅಧ್ಯಾಪಕರಾದ ಅಬೂಬಕ್ಕರ್ ಮುಸ್ಲಿಯಾರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
Next Story





