ಫರಂಗಿಪೇಟೆ ಕೆನರಾ ಬ್ಯಾಂಕ್ ನಿಂದ ಕಳವಿಗೆ ಯತ್ನ ಪ್ರಕರಣ: ಆರೋಪಿಯ ಸೆರೆ

ಬಂಟ್ವಾಳ: ಫರಂಗಿಪೇಟೆಯ ಕೆನರಾ ಬ್ಯಾಂಕಿನಿಂದ ಕಳವಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪುದು ಗ್ರಾಮದ ಮಾರಿಪಳ್ಳದ ಸುಜೀರು ಬದಿಗುಡ್ಡೆ ನಿವಾಸಿ ಮುಹಮ್ಮದ್ ಶಾಕಿರ್ ಬಂಧಿತ ಆರೋಪಿ. ಈತನನ್ನು ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ಫರಂಗಿಪೇಟೆಯ ಮಿನೇಜಸ್ ಪ್ಲಾಝಾದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ವಾರದ ಹಿಂದೆ ಕಳ್ಳತನದ ಯತ್ನ ನಡೆದಿತ್ತು. ಬ್ಯಾಂಕಿನ ಮೇಲ್ಛಾವಣಿಯನ್ನು ಕೊರೆದು ಒಳಪ್ರವೇಶಿಸಿ ಹಣ ಮತ್ತು ಚಿನ್ನಾಭರಣಗಳನ್ನು ಕಳವಿಗೆ ಯತ್ನಿಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜು.13ರಂದು ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Next Story




