ಫೆ.7-9: ಕೆಎಸ್ಎಫ್ಎ ಕಪ್ ಫುಟ್ಬಾಲ್ ಟೂರ್ನಮೆಂಟ್

ಮಂಗಳೂರು, ಫೆ.3: ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ (ಡಿಕೆಡಿಎಫ್ಎ) ವತಿಯಿಂದ ಕೆಎಸ್ಎಫ್ಎ ಕಪ್ 2026 ಅಂಡರ್-13 ಮತ್ತು ಅಂಡರ್-15 ಫುಟ್ಬಾಲ್ ಟೂರ್ನಮೆಂಟ್ನ್ನು ಮಂಗಳೂರಿನ ನೆಹರೂ ಮೈದಾನ ಫುಟ್ಬಾಲ್ ಗ್ರೌಂಡ್ನಲ್ಲಿ ಫೆ.7ರಿಂದ 9ರ ತನಕ ನಡೆಯಲಿದೆ.
ಈ ಟೂರ್ನಮೆಂಟ್ಗೆ ಯೆನೆಪೋಯ ವಿಶ್ವವಿದ್ಯಾಲಯ ಮತ್ತು ಎಫ್ಸಿ ಮಂಗಳೂರು ಪ್ರಾಯೋಜಕರಾಗಿದ್ದಾರೆ.
ಈ ಸ್ಪರ್ಧೆಯನ್ನು ಕೆಳಕಂಡ ಎರಡು ವಯೋಮಿತಿ ವಿಭಾಗಗಳಲ್ಲಿ ನಡೆಸಲಾಗುತ್ತದೆ.
ಅಂಡರ್-13 ಮತ್ತು ಅಂಡರ್-15 ಟೂರ್ನಮೆಂಟ್ ಆಗಿದ್ದು, ಲೀಗ್-ಕಮ್-ನಾಕ್ಔಟ್ ಮಾದರಿ, 9 ವಿರುದ್ಧ 9 ಆಟಗಾರರು ಆಡಳು ಅವಕಾಶ ಇದೆ. ಪ್ರತಿ ತಂಡಕ್ಕೆ ಮೂವರು ಬದಲಿ ಆಟಗಾರರಿಗೆ ಆಡಲು ಅವಕಾಶ ಇದೆ.
ಆಸಕ್ತ ತಂಡಗಳು 5 ಫೆಬ್ರವರಿ 2026ರ ಒಳಗೆ ನೋಂದಣಿ ಮಾಡಿಕೊಳ್ಳಬಹುದು. ಪ್ರತಿ ವಯೋವರ್ಗದಲ್ಲಿ ಮೊದಲ 8 ತಂಡಗಳನ್ನು ಟೂರ್ನಮೆಂಟ್ಗೆ ಆಯ್ಕೆ ಮಾಡಲಾಗುತ್ತದೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಟೂರ್ನಮೆಂಟ್ ಸಮಿತಿಯ ಆರನ್ ( 81295 39645) ಮತ್ತು ಹುಸೇನ್ (98458 87404) ಇವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.





