ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಎಂ. ಬಿ. ಎ ಪದವಿ ಪರೀಕ್ಷೆಯಲ್ಲಿ ಉಷಾ ನಾಯಕ್ ಗೆ ಪ್ರಥಮ ರ‍್ಯಾಂಕ್

ಮಂಗಳೂರು, ಫೆ. 27: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಕಳೆದ 2023ನೇ ಸಾಲಿನಲ್ಲಿ ನಡೆಸಿದ ಅಂತಿಮ ಎಂಬಿಎ ಪರೀಕ್ಷೆಯಲ್ಲಿ ಉಷಾ ನಾಯಕ್ ಅವರು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಕೆನರಾ ಕಾಲೇಜು ಹಾಗೂ ಸಂಧ್ಯಾ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ನಿರ್ವಹಣಾ ಶಾಸ್ತ್ರದ ಉಪನ್ಯಾಸಕಿಯಾಗಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಉಷಾ ನಾಯಕ್, ಮೂಡಬಿದ್ರೆ ಒಂಟಿಕಟ್ಟೆಯ ರವೀಂದ್ರ ನಾಯಕ್ ಹಾಗೂ ಜಯಶ್ರೀ ನಾಯಕ್ ಅವರ ಪುತ್ರಿ.
ಯೆನೆಪೋಯ ಕಾಲೇಜಿನ ನಿರ್ವಹಣಾ ವಿಭಾಗದ ಉಪನ್ಯಾಸಕ ಡಾ. ಪ್ರಶಾಂತ್ ಅವರ ಪತ್ನಿಯಾಗಿರುವ ಉಷಾ ನಾಯಕ್, ಮಾ. 3ರಂದು ನಡೆಯಲಿರುವ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ಸ್ವೀಕರಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.
Next Story





