ಪುತ್ತೂರಿನಲ್ಲಿ ಬಲವಂತದ ಬಂದ್ ಯತ್ನ: ಪೊಲೀಸರಿಂದ ತಡೆ

ಪುತ್ತೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಬಂದ್‌ಗೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿದ್ದು, ಪುತ್ತೂರಿನಲ್ಲಿ ಹಿಂದುತ್ವ ಕಾರ್ಯಕರ್ತರು ಬಲವಂತದಿಂದ ಮಾಡಿಸುತ್ತಿದ್ದ ಬಂದ್ ಕಾರ್ಯಾಚರಣೆಯನ್ನು ಪೊಲೀಸರು ತಡೆದಿರುವ ಬಗ್ಗೆ ವರದಿಯಾಗಿದೆ.
ಕೆಎಸ್ಸಾರ್ಟಿಸಿ ವಾಣಿಜ್ಯ ಸಂಕೀರ್ಣದಲ್ಲಿ ತೆರೆದಿದಿದ್ದ ಕೆಲವು ಅಂಗಡಿಗಳನ್ನು ಬಂದ್ ಮಾಡಿಸಲು ಮುರಳಿಕೃಷ್ಣ ಹಸಂತಡ್ಕ ಮತ್ತು ಅರುಣ್ ಕುಮಾರ್ ಪುತ್ತಿಲ ತಂಡ ಜಮಾಯಿಸಿತ್ತು. ಆದರೆ ಅಲ್ಪ ಸಮಯದ ಬಳಿಕ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿದರು ಎಂದು ತಿಳಿದು ಬಂದಿದೆ.
Next Story





