ಕಾಶಿಪಟ್ಣದಲ್ಲಿ ಖಾಝಿ ತ್ವಾಕಾ ಉಸ್ತಾದ್‌ರ ಅಂತ್ಯಕ್ರಿಯೆ

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ನಿಧನರಾದ ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ದಫನ ಕ್ರಿಯೆಯು ಇಂದು ಬೆಳಗ್ಗೆ ಮೂಡುಬಿದಿರೆ ಸಮೀಪದ ಕಾಶಿಪಟ್ಣದ ದಾರುನ್ನೂರ್ ಎಜುಕೇಶನ್ ಸೆಂಟರ್‌ನ ಆವರಣದಲ್ಲಿ ನಡೆಯಿತು.
ಕಾಸರಗೋಡಿನಿಂದ ಇಂದು ಮುಂಜಾನೆ ಮೃತದೇಹವನ್ನು ದಾರುನ್ನೂರ್ ಎಜುಕೇಶನ್ ಸೆಂಟರ್‌ಗೆ ತರಲಾಯಿತು. ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ದಫನ ಕಾರ್ಯ ನಡೆಸಲಾಯಿತು.
ಈ ಸಂದರ್ಭ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್, ಪ್ರಮುಖ ಉಲಮಾ, ಉಮರಾಗಳ ಸಹಿತ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.
Next Story






