ಸತತ ಏರಿಕೆಯ ನಂತರ ಮಂಗಳವಾರ ಸ್ವಲ್ಪ ಇಳಿಕೆ; ಹತ್ತು ಗ್ರಾಂ ಚಿನ್ನದ ದರವೆಷ್ಟು?

ಸಾಂದರ್ಭಿಕ ಚಿತ್ರ | Photo Credit : freepik
ಮಂಗಳೂರು: ಕಳೆದ ನಾಲ್ಕೈದು ವಹಿವಾಟುಗಳಲ್ಲಿ ಬಂಗಾರ ಸೇರಿದಂತೆ ವಿಶ್ವದ ಅಮೂಲ್ಯ ಲೋಹಗಳು ಏರುಹಾದಿಯಲ್ಲಿವೆ. ಆದರೆ ಮಂಗಳವಾರ ಮಂಗಳೂರಿನಲ್ಲಿ ಹತ್ತು ಗ್ರಾಂ ಬಂಗಾರದ ಬೆಲೆ ಸ್ವಲ್ಪ ಇಳಿದಿದೆ.
ಚಿನ್ನದ ಬೆಲೆ ಏರುತ್ತಲೇ ಇದೆ, ಆದರೆ ಇಂದು ಸ್ವಲ್ಪ ಇಳಿಕೆ ಕಂಡಿದೆ. 2025ರಲ್ಲಿ 10 ಗ್ರಾಮ್ ಚಿನ್ನದ ದರ ಶೇ 50ಕ್ಕಿಂತಲೂ ಹೆಚ್ಚು ಏರಿಕೆಯಾಗಿದೆ. ಅಂತಾರಾಷ್ಟ್ರಿಯ ಬೆಳವಣಿಗೆಗಳೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕಳೆದ 3 ದಿನಗಳಿಂದ ಸತತವಾಗಿ ಏರಿಕೆಯಾಗಿದ್ದ ಚಿನ್ನದ ದರಗಳು ಮಂಗಳವಾರ ಸ್ವಲ್ಪ ಇಳಿಕೆ ಕಂಡಿವೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟು?
ಮಂಗಳವಾರ ಮಂಗಳೂರಿನಲ್ಲಿ ಹತ್ತು ಗ್ರಾಂ ಬಂಗಾರದ ಬೆಲೆ ಸ್ವಲ್ಪ ಇಳಿದಿದೆ. 24 ಕ್ಯಾರೆಟ್ ಚಿನ್ನಕ್ಕೆ ರೂ. 13,020(-28), 22 ಕ್ಯಾರೆಟ್ ಚಿನ್ನಕ್ಕೆ ರೂ. 11,935( -25) ಮತ್ತು 18 ಕ್ಯಾರೆಟ್ ಚಿನ್ನಕ್ಕೆ ರೂ. 9,765 (-21) ಬೆಲೆ ಕುಸಿದಿದೆ.
ವಿಶೇಷವಾಗಿ, ಅಮೆರಿಕದ ಸುಂಕಗಳು, ಫೆಡ್ ರಿಸರ್ವ್ ನಿರ್ಧಾರಗಳು, ಡಾಲರ್ ಮೌಲ್ಯದ ಜೊತೆಗೆ ವಿವಿಧ ದೇಶಗಳ ನಡುವಿನ ಯುದ್ಧಗಳು ಪರಿಣಾಮ ಬೀರುತ್ತಿವೆ ಎಂದು ಹೇಳಲಾಗಿದೆ.
24 ಕ್ಯಾರೆಟ್ ಶುದ್ಧ ಚಿನ್ನ ಬೆಲೆಯಲ್ಲಿ ಸೋಮವಾರ ₹660 ಏರಿಕೆಯಾಗಿ ₹1,30,480ಕ್ಕೆ ತಲುಪಿತ್ತು. ಆದರೆ, ಇಂದು ಮಂಗಳವಾರ ₹280 ಇಳಿಕೆಯಾಗಿದ್ದು, 1,30,200ರಲ್ಲಿ ವಹಿವಾಟು ನಡೆಸುತ್ತಿದೆ. ನಿನ್ನೆ ಸೋಮವಾರ 22 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂ ₹600 ಏರಿಕೆಯಾಗಿ ₹1,19,600ಕ್ಕೆ ತಲುಪಿತ್ತು. ಆದರೆ, ಇಂದು ಮಂಗಳವಾರ ₹250 ಇಳಿಕೆಯಾಗಿದ್ದು, ₹1,19,350 ರಲ್ಲಿ ವಹಿವಾಟು ನಡೆಸುತ್ತಿದೆ. ಹೈದರಾಬಾದ್ನಲ್ಲಿ ಚಿನ್ನದ ದರಗಳು ಸತತ ಮೂರನೇ ದಿನವೂ ಏರಿಕೆಯಾಗಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರಗಳು
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರಗಳು ಸತತವಾಗಿ ಏರುತ್ತಿವೆ. ಇಂದು ಸ್ಪಾಟ್ ಗೋಲ್ಡ್ ದರ ಪ್ರತಿ ಔನ್ಸ್ಗೆ 5.51 ಡಾಲರ್ ನಷ್ಟು ಏರಿಕೆಯಾಗಿ 4224 ಡಾಲರ್ ನಲ್ಲಿ ಟ್ರೇಡ್ ಆಗುತ್ತಿದೆ. ಅಲ್ಲದೆ, ಸ್ಪಾಟ್ ಸಿಲ್ವರ್ ದರ ಪ್ರತಿ ಔನ್ಸ್ಗೆ 1.34% ರಷ್ಟು ಏರಿಕೆಯಾಗಿ 57.48 ಡಾಲರ್ಗೆ ತಲುಪಿದೆ. ಕಳೆದ ಒಂದು ತಿಂಗಳಲ್ಲಿ ಚಿನ್ನದ ದರ 217 ಡಾಲರ್ನಷ್ಟು ಹೆಚ್ಚಿರುವುದು ಇತರ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ.
ಬೆಳ್ಳಿ ದರವೂ ಮತ್ತೆ ಏರಿಕೆ
ಬೆಳ್ಳಿ ದರವೂ ವಿಪರೀತವಾಗಿ ಏರುತ್ತಿದ್ದು, ಒಂದು ಕೆಜಿ ಬೆಳ್ಳಿ ದರ ಮತ್ತೆ ರೂ. 2 ಲಕ್ಷ ಸಮೀಪಿಸಿದೆ. ಇಂದು ಹೈದರಾಬಾದ್ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 4,000 ರಷ್ಟು ಹೆಚ್ಚಾಗಿದೆ. ಇದರೊಂದಿಗೆ, ಒಂದು ಕೆಜಿ ಬೆಳ್ಳಿ ದರ ರೂ.1,96,000 ತಲುಪಿದೆ. ಆದರೆ, ಮುಂಬೈ, ದಿಲ್ಲಿ, ಬೆಂಗಳೂರು ಮುಂತಾದ ಪ್ರದೇಶಗಳಲ್ಲಿ ಒಂದು ಕೆಜಿ ಬೆಳ್ಳಿ ರೂ. 1,88,000 ರಲ್ಲಿ ಲಭ್ಯವಿರುವುದು ಗಮನಾರ್ಹ.
ಮೇಲೆ ತಿಳಿಸಿದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮಾರುಕಟ್ಟೆ ಬೆಲೆಗಳಾಗಿವೆ. ಇವು ತೆರಿಗೆ ಮೇಕಿಂಗ್ ಶುಲ್ಕ ಮೊದಲಾದ ಇತರೆ ವೆಚ್ಚಗಳನ್ನು ಒಳಗೊಂಡಿಲ್ಲ. ರಾಜ್ಯದಿಂದ ರಾಜ್ಯಕ್ಕೆ ತೆರಿಗೆ ದರಗಳು ಬದಲಾಗುತ್ತವೆ. ಹೀಗಾಗಿ ಆಯಾ ರಾಜ್ಯಗಳಲ್ಲಿ ಚಿನ್ನ- ಬೆಳ್ಳಿ ಬೆಲೆಗಳಲ್ಲಿ ವ್ಯತ್ಯಾಸ ಇರುತ್ತದೆ.
ಮೇಲೆ ತಿಳಿಸಿದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮಾರುಕಟ್ಟೆ ಬೆಲೆಗಳಾಗಿವೆ. ಇವು ತೆರಿಗೆ ಮೇಕಿಂಗ್ ಶುಲ್ಕ ಮೊದಲಾದ ಇತರೆ ವೆಚ್ಚಗಳನ್ನು ಒಳಗೊಂಡಿಲ್ಲ. ರಾಜ್ಯದಿಂದ ರಾಜ್ಯಕ್ಕೆ ತೆರಿಗೆ ದರಗಳು ಬದಲಾಗುತ್ತವೆ. ಹೀಗಾಗಿ ಆಯಾ ರಾಜ್ಯಗಳಲ್ಲಿ ಚಿನ್ನ- ಬೆಳ್ಳಿ ಬೆಲೆಗಳಲ್ಲಿ ವ್ಯತ್ಯಾಸ ಇರುತ್ತದೆ.







