ಜೋಕಟ್ಟೆಯಲ್ಲಿ ಗುಡ್ಡ ಕುಸಿತ: ಅಪಾಯದಲ್ಲಿ ಮನೆ; ಮನೆಮಂದಿಯ ತೆರವು

ಸುರತ್ಕಲ್ : ಗುರುವಾರ ರಾತ್ರಿ ಸುರಿದ ನಿರಂತರ ಭಾರೀ ಮಳೆಯಿಂದಾಗಿ ಜೋಕಟ್ಟೆ ಪಂಚಾಯತ್ ಮುಂಭಾಗದ ಗುಡ್ಡ ಕುಸಿದು ಮನೆಯೊಂದು ಕುಸಿದು ಬೀಳುವ ಹಂತ ತಲುಪಿರುವ ಘಟನೆ ಶುಕ್ರವಾರ ವರದಿಯಾಗಿದೆ.
ಜೋಕಟ್ಟೆ ನಿವಾಸಿ ಅಬ್ದುಲ್ಲಾ ಎಂಬವರ ಮನೆಯ ಹಿಂಭಾಗದ ಗುಡ್ಡ ಭಾಗಶಃ ಕುಸಿದಿದ್ದು, ಮನೆ ಅಪಾಯಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಅಬ್ದುಲ್ಲಾ ಅವರ ಮನೆಮಂದಿ ಮತ್ತು ಕೆಳಭಾಗದ ಮನೆಗಳಲ್ಲಿನ ನಿವಾಸಿಗಳನ್ನು ತೆರವು ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ.
ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಕುಸಿಯುವ ಹಂತದಲದಲಿರುವ ಗುಡ್ಡಕ್ಕೆ ಟರ್ಪಾಲ್ ಹಾಸಲಾಗಿದ್ದು, ಗುಡ್ಡ ಕುಸಿತದ ಪ್ರಮಾಣ ತಗ್ಗಿಸಲು ಗ್ರಾಮಸ್ಥರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
Next Story