ಕೈ ಬರಹ ಮೂಲಕ ಕುರಾನ್ ಬರೆದ ವಿದ್ಯಾರ್ಥಿನಿ ಸಜ್ಲಾ ಇಸ್ಮಾಯಿಲ್‌ಗೆ ಐಬಿಆರ್ ಅಚೀವರ್ ಪ್ರಶಸ್ತಿ

ಪುತ್ತೂರು: ಪವಿತ್ರ ಕುರಾನ್ ಗ್ರಂಥವನ್ನು ಕೈ ಬರಹ ಮೂಲಕ ಕಲಂನಿಂದ ಇಂಕ್ ಗೆ ಅದ್ದಿ ಬರೆದು ದಾಖಲೆ ನಿರ್ಮಿಸಿದ್ದ ಪುತ್ತೂರು ತಾಲೂಕಿನ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿ ಸಜ್ಲಾ ಇಸ್ಮಾಯಿಲ್ ಬೈತಡ್ಕ ಅವರು ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದು ಐಬಿಆರ್ ಅಚೀವರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ಇವರ ಅಸಾಮಾನ್ಯ ಸಾಧನೆಯನ್ನು ಗುರುತಿಸಿ ಪದಕ ಮತ್ತು ಪ್ರಶಸ್ತಿ ನೀಡಿ ಗೌರವಿಸಿದೆ.
604 ಪುಟಗಳಲ್ಲಿ 114 ಖಾಂಡಗಳ ಇದಕ್ಕೆ ಸುಮಾರು 2416 ತಾಸುಗಳನ್ನು ವ್ಯಯಿಸಲಾಗಿದ್ದು, 15 ಬಾಟಲಿ ಇಂಕ್, 152 ಚಾರ್ಟ್ ಪೇಪರ್,102 ಎರೇಸರ್ ಉಪಯೋಗಿಸಲಾಗಿದ್ದು, ಅಗಸ್ಟ ತಿಂಗಳಲ್ಲಿ ಇದರ ಲೋಕಾರ್ಪಣೆ ಕಾರ್ಯಕ್ರಮ ಕುಂಬ್ರ ಮರ್ಕಝ್ ಕ್ಯಾಂಪಸ್ ನಲ್ಲಿ ನಡೆದಿದ್ದು ಇದು ವ್ಯಾಪಕ ಪ್ರಚಾರ ಪಡೆದಿತ್ತು.
ಪ್ರಪಂಚದಲ್ಲಿ ಕೆಲವರು ಕೈ ಬರಹದಲ್ಲಿ ಕುರಾನ್ ಬರೆದಿದ್ದರೂ ಮಷಿ ಅದ್ದಿ ಕಲಂ ಮೂಲಕ ಕುರಾನ್ ಬರೆದ ಏಕೈಕ ವಿದ್ಯಾರ್ಥಿನಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಹೆಸರು ನೋಂದಾಯಿಸಲ್ಪಟ್ಟಿದ್ದು ಏಷ್ಯನ್ ಬುಕ್ ಆಫ್ ರೆಕಾರ್ಡ್, ಲಿಮ್ಕಾ ದಾಖಲೆ, ಗಿನ್ನಿಸ್ ದಾಖಲೆಗಳಿಗೆ ಹಂತಗಳು ಪ್ರಗತಿಯಲ್ಲಿದೆ.
ಈಡನ್ ಗ್ಲೋಬಲ್ ಸ್ಕೂಲ್ ಬೆಳಂದೂರು ಇದರ ಸ್ಥಾಪಕ ಕಾರ್ಯದರ್ಶಿಯಾದ ಇಸ್ಮಾಯಿಲ್ ಹಾಜಿ ಬೈತಡ್ಕ ಮತ್ತು ಝಹ್‌ರಾ ಜಾಸ್ಮಿನ್ ದಂಪತಿಯ ಪುತ್ರಿಯಾದ ಸಜ್ಲಾ ಇಸ್ಲಾಯಿಲ್ ಅವರ ಈ ಸಾಧನೆ ಅರಬ್ ದೇಶಗಳಲ್ಲೂ ವ್ಯಾಪಕ ಪ್ರಚಾರ ಪಡೆದಿದೆ.







